ದಾವಣಗೆರೆ: ನಗರದ ಎಮ್.ಸಿ.ಸಿ.’ಬಿ’ ಹಾಗೂ ಡಿ.ಸಿ.ಎಮ್.ಫೀಡರ್‍ಗಳಲ್ಲಿ ನಾಳೆ (ನ.25) ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ. ಎಮ್.ಸಿ.ಸಿ.ಬಿ ಫೀಡರ್ ವ್ಯಾಪ್ತಿಯ “ಶಾಮನೂರು ರಸ್ತೆ, 7ನೇ ಕ್ರಾಸ್‍ಕುವೆಂಪು ನಗರ, ಬೂಸ್ನೂರ್ ಪ್ರಿಂಟರ್ ಸುತ್ತಮುತ್ತ, ಪವನ್ ಬಾರ್& ವುಡನ್ ಕಲ್ಚರ್ ಶಾಪ್ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಡಿ.ಸಿ.ಎಂ ಫೀಡರ್ ವ್ಯಾಪ್ತಿಯ ಡಿ.ಸಿ.ಎಮ್. ಟೌನ್‍ಶಿಪ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.



