ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ ನಿರುದ್ಯೋಗಿ ಪದವೀಧರರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಹೆಚ್ಚು ಹೆಚ್ಚು ತರಬೇತಿ ಆಯೋಜಿಸಲಾಗುವುದು ಎಂದು ವಿಧಾನಪರಿಷತ್್ ಸದಸ್ಯ ಎಂ. ಚಿದಾನಂದಗೌಡ ಭರವಸೆ ನೀಡಿದರು.
ಮುರುಘಾಮಠಕ್ಕೆ ಭಾನುವಾರ ಭೇಟಿ ನೀಡಿ, ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದ ನಂತರ ಮೀಡಿಯಾದವರೊಂದಿಗೆ ಮಾತನಾಡಿದರು. ಪದವೀಧರರು, ಶಿಕ್ಷಕರು, ಉಪನ್ಯಾಸಕರ ಜೊತೆ ಬೆರೆತು ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್.ನವೀನ್, ಮುಖಂಡರಾದ ಹನುಮಂತೇಗೌಡ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಸಂಪತ್ ಕುಮಾರ್, ಬರಗೂರು ಶಿವಕುಮಾರ್, ಕಲ್ಲೇಶಯ್ಯ, ಚಂದ್ರು ಇತರರು ಇದ್ದರು.