ಡಿವಿಜಿಸುದ್ದಿ.ಕಾಂ, ದಾವಣಗೆರೆ: 2009 ರಲ್ಲಿ ನೆರೆ ಬಂದಾಗ ಯುಪಿಎ ಸರ್ಕಾರ ಎಷ್ಟು ಹಣ ಕೊಟ್ಟಿತ್ತು ಎಂಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವಾ, ಕೇಂದ್ರ ಸರ್ಕಾರ ಮಧ್ಯಂತರವಾಗಿ 1,200 ಕೋಟಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡಲಿದೆ. ಪ್ರತಿಪಕ್ಷಗಳು ಎಲ್ಲದಕ್ಕೂ ಟೀಕೆ ಮಾಡೋದು ಸರಿಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, 2009 ರಲ್ಲಿ ಬಿಜೆಪಿ ಸರ್ಕಾರಮನಮೋಹನ್ ಸಿಂಗ್ ಸರ್ಕಾರ 17 ಸಾವಿರ ಕೋಟಿ ಕೇಳಿತ್ತು.ಆದರೆ, ಕೊಟ್ಟಿದ್ದು ಬರಿ 700 ಕೋಟಿ ಮಾತ್ರ .ವಿರೋಧ ಪಕ್ಷದವರ ಅಜೆಂಡ ಏನೂ ಗೋತ್ತಿಲ್ವಾ ಎಂದರು.
ಸಾರಿಗೆ ಇಲಾಖೆಯ ನೌಕರಿಗೆ ಸಂಬಳ ನೀಡಿಲ್ಲದಕ್ಕೆ ಖಜಾನೆ ಖಾಲಿಯಾಗಿದೆ ಎಂದಲ್ಲ. ಸಾರಿಗೆ ನಿಗಮದ್ದು ಹಲವಾರು ವರ್ಷಗಳ ಸಮಸ್ಯೆಯಿದೆ ಆ ಕಾರಣಕ್ಕೆ ಪೆಂಡಿಂಗ್ ಆಗಿದೆ. ವಿವಿಧ ಕೆಲಸಗಳನ್ನು ಮಾಡಲು ಸರ್ಕಾರದಲ್ಲಿ ಯಾವುದೇ ತೊಂದರೆ ಇಲ್ಲ. ಪೊಲೀಸರಿಗೆ ನಾಲ್ಕನೇ ರಜೆ ದಿನದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.



