ಡಿವಿಜಿಸುದ್ದಿ.ಕಾಂ, ದಾವಣಗೆರೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡ ಹಾಕಿ ಹಣ ದೋಚುತ್ತಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಲಾರಿ ಚಾಲಕ ಅನೀಲ್ ಕುಮಾರ್, ಭರಮಸಾಗರ ಮೂಲದ ದಿನೇಶ್, ರಾಕೇಶ್, ಲೋಹಿತ್ ಬಂಧಿತರು. ಬಂಧಿತರಿಂದ 1.34 ಲಕ್ಷ ರೂಪಾಯಿ ಸೇರಿದಂತೆ, ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
ಆ.1 ರಂದು ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಲಾರಿ ಅಡ್ಡ ಗಟ್ಟಿ ಕಳ್ಳತನ ಮಾಡಿದ ಕಳ್ಳರು.ಚಾಲಕ ಅನಿಲ್ ಪ್ಲಾನ್ ನಂತೆ ಆನಗೋಡು ಸಮೀಪ ಬೈಕ್ ನಲ್ಲಿ ಬಂದ ಮೂವರು ಲಾರಿ ಅಡ್ಡಗಟ್ಟಿ, ಕ್ಯಾಷಿಯರ್ ವಿನಾಯಕ ಎಂಬುವವರಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಹಣದ ಬ್ಯಾಗ್ ಕಿತ್ತು ಪರಾರಿಯಾಗಿದ್ದರು.
ಘಟನೆ ನಂತರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಚಾಲಕ ಅನಿಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.



