ಡಿವಿಜಿ ಸುದ್ದಿ, ಶಿವಮೊಗ್ಗ: ಸಿಗಂಧೂರು ಚೌಡೇಶ್ವರಿ ದೇವಸ್ಥಾನ ನಿರ್ವಹಣೆಗೆ ಜಿಲ್ಲಾಡಳಿತ ರಚಿಸಿರುವ ಸಮಿಗೆ ದೇವಸ್ಥಾನ ಧರ್ಮದರ್ಶಿ ರಾಮಪ್ಪ ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನ ಈಡಿಗ ಸಮುದಾಯಕ್ಕೆ ಸೇರಿದ್ದು ಎಂದು ಧ್ವನಿ ಎತ್ತಿದ್ದಾರೆ.
ಈಡಿಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚೌಡೇಶ್ವರಿ ದೇವಸ್ಥಾನಕ್ಕೆ ಸಮಿತಿಯನ್ನು ಹಿಂಪಡೆಯಬೇಕು. ಈ ಬಗ್ಗೆ ಈಡಿಗ ಸಮುದಾಯ ಪ್ರತಿಭಟಿಸಬೇಕು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಸಿಗಂಧೂರು ದೇವಸ್ಥಾನದಲ್ಲಿ ಯಾವುದೇ ಭ್ರಷ್ಟಚಾರ ನಡೆದಿಲ್ಲ. ಇದು ಹಿಂದುಳಿದ ವರ್ಗಗಳ ಧಾರ್ಮಿಕ ಕೇಂದ್ರ. ಆದರೂ ದೇವಸ್ಥಾನಕ್ಕೆ ಸಮಿತಿ ರಚನೆ ಮಾಡುವ ಮೂಲಕ ಏನೋ ಕಂಟಕ ತರಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ರಚಿಸಿರುವ ಸಮಿತಿಯನ್ನು ಹಿಂಪಡೆಯಬೇಕು ಎಂದು ಸರ್ಕಾರ, ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುತ್ತೇವೆ. ಆರ್ಯ ಈಡಿಗ ಮಠದ ರೇಣುಕಾನಂದ ಶ್ರೀಗಳು, ಸಮುದಾಯ ಸಂಚಿನ ವಿರುದ್ಧ ಹೋರಾಟ ನಡೆಸಬೇಕು ಎಂದರು.



