ಡಿವಿಜಿಸುದ್ದಿ.ಕಾಂ, ಹರಿಹರ: ನಗರದ ಆರೋಗ್ಯಮಾತೆ ಚರ್ಚ್ ಕಥೋಲಿ ಕ್ರೈಸ್ತ ಪೋಪ್ ಫ್ರಾನ್ಸಿಸ್ ಅವರಿಂದ ಮಹಾಲಯ ಸ್ಥಾನಮಾನ ಪಡೆದಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಆರೋಗ್ಯಮಾತೆಯ ಪ್ರಧಾನ ಗುರು, ಅಂತೋನಿ ಪೀಟರ್, ಕಳೆದ ತಿಂಗಳು 18 ರಂದು ಕಥೋಲಿ ಕ್ರೈಸ್ತಪೋಪ್ ಫ್ರಾನ್ಸಿಸ್ ಅಧಿಕೃತವಾಗಿ ಹರಿಹರ ಆರೋಗ್ಯಮಾತೆಗೆ ಮಹಾಲಯ ಸ್ಥಾನಮಾನ ಘೋಷಿಸಿದ್ದಾರೆ ಎಂದರು.

ಹರಿಹರದ ಆರೋಗ್ಯಮಾತೆಯು ಹಲವಾರು ವಿಶೇಷತೆಯಿಂದ ಕೂಡಿದ್ದು ಪುಣ್ಯಕ್ಷೇತ್ರವಾಗಿದೆ. ಮಹಾಲಯ ಸ್ಥಾನಮಾನ ಪಡೆದ ಕರ್ನಾಟಕದ ಮೂರನೇ ಚರ್ಚ್ ಇದಾಗಿದೆ. ಇದಕ್ಕೂ ಮೊದಲು ಬೆಂಗಳೂರಿನ ಮೇರಿ ಮಾತೆ ಹಾಗೂ ಕರ್ಕಾಳದ ಸಂತ ಲಾರೆನ್ಸ್ ಪುಣ್ಯಕ್ಷೆತ್ರಗಳು ಮಹಾಲಯ ಬಿರುದು ಪಡೆದಿದ್ದವು ಎಂದರು.



