ಭೋಪಾಲ್: ಮಧ್ಯಪ್ರದೇಶದ ಸಿಯೋನಿನಲ್ಲಿ ಇಂದು ಬೆಳಿಗ್ಗೆ3.3 ರಷ್ಟು ತೀವ್ರತೆ ಭೂಮಿ ಕಂಪಿಸಿದ್ದು, ಇನ್ನು ಮಹಾರಾಷ್ಟ್ರದ ನಾಗಪುರದಲ್ಲೂ ಭೂಕಂಪನ ಅನುಭವಾಗಿದೆ.
ಸಿಯೋನಿಯಲ್ಲಿ ಇಂದು ಬೆಳಿಗ್ಗೆ 4.10 ಕ್ಕೆ ಭೂಮಿ ಕಂಪಿಸಿದ್ದು, 15 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ಆಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಭೋಪಾಲ್ ಕೇಂದ್ರದ ವಿಜ್ಞಾನಿ ವೇದ ಪ್ರಕಾಶ್ ಸಿಂಗ್ ಮಾಹಿತಿ ನೀಡಿದ್ದಾರೆ. ದುಂಡಾ ಸಿಯೋನಿ ಉಪನಗರ ಮತ್ತು ಜಿಲ್ಲೆಯ ಇತರ ಭಾಗಗಳ ಕೆಲವು ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.



