Connect with us

Dvgsuddi Kannada | online news portal | Kannada news online

ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಪತ್ನಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

ಪ್ರಮುಖ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಪತ್ನಿಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

ಡಿವಿಜಿ ಸುದ್ದಿ, ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಅಭಿಮಾನಿಗಳ ಜೊತೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಪ್ರಾಣಿ ಪ್ರಿಯ ದರ್ಶನ್, ಅಭಿಮಾನಿಗಳ ಮನದಲ್ಲಿ ಬಾಸ್ ಅಂತಲೇ ಕರೆಸಿಕೊಂಡವರು. ಇದೀಗ  ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಅವರದೇ ಹಾದಿಯಲ್ಲಿ ನಡೆದಿದ್ದು, ಟೈಮ್ಸ್ ಬ್ಯುಸಿನೆಸ್ ನೀಡುವ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮ ಆಂಭಿಸಿದ್ದರು. ‘ಮೈ ಫ್ರೆಶ್ ಬಾಸ್ಕೆಟ್’ ಎಂಬ ಆನ್ ಲೈನ್ ಆ್ಯಪ್ ಮೂಲಕ  ರೈತರಿಗೆ ನೆರವಾಗಿದ್ದರು. ಆ ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿತ್ತು. ಅಲ್ಲದೆ ಗ್ರಾಹಕರಿಗೂ ರೈತರಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳು ತಲುಪುತ್ತಿದ್ದವು. ಹೀಗೆ ರೈತರಿಗೆ ನೆರವಾಗುವ ಸಲುವಾಗಿ ವಿಜಯಲಕ್ಷ್ಮಿ ಅವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ವಿಜಯಲಕ್ಷ್ಮಿ ಅವರು ಹೊಸದಾಗಿ ಆರಂಭಿಸಿರುವ ಆನ್‍ಲೈನ್ ಉದ್ಯಮಕ್ಕೆ ಸಂಬಂಧಪಟ್ಟಂತೆ ಇದೀಗ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಟೈಮ್ಸ್ ಬ್ಯುಸಿನೆಸ್ ನವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ವಿಜಯಲಕ್ಷ್ಮಿ ಅವರಿಗೆ ನೀಡಿ ಸನ್ಮಾನಿಸಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • astrology today astrology today

    ಪ್ರಮುಖ ಸುದ್ದಿ

    ಸೋಮವಾರದ ರಾಶಿ ಭವಿಷ್ಯ 30 ಜೂನ್ 2025

    By

    ಈ ರಾಶಿಯವರಿಗೆ ಉದ್ಯೋಗದಲ್ಲಿ ವರ್ಗಾವಣೆ ಪ್ರಮೋಷನ್ ವೇತನದಲ್ಲಿ ಏರಿಕೆ ಸಂಭವ, ಚಿನ್ನದ ತಟ್ಟೆಯಲ್ಲಿ ಊಟ ಮಾಡುವ ಏಕೈಕ ರಾಶಿ ಎಂದರೆ ಇವರು,...

  • rain22 rain22

    ಪ್ರಮುಖ ಸುದ್ದಿ

    ಮುಂದಿನ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಮುನ್ಸೂಚನೆ

    By

    ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain)  ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 28 ಜೂನ್ 2025

    By

    ಈ ರಾಶಿಯವರ ಉದ್ಯೋಗ ವ್ಯಾಪಾರ ವಹಿವಾಟಗಳಲ್ಲಿ ಭಾರಿ ನಷ್ಟ, ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ, ಶನಿವಾರದ ರಾಶಿ ಭವಿಷ್ಯ...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 26 ಜೂನ್ 2025

    By

    ಈ ರಾಶಿಯವರಿಗೆ ನಂಬಿದವರು ದೂರ ಆಗುತ್ತಾರೆ, ಈ ರಾಶಿಯವರ ಮದುವೆ ವಿಳಂಬ ಎಂಬ ಏಕೆ? ಗುರುವಾರದ ರಾಶಿ ಭವಿಷ್ಯ 26 ಜೂನ್...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

To Top