ಡಿವಿಜಿ ಸುದ್ದಿ, ದಾವಣಗೆರೆ: ಸಾಧನೆ ಮತ್ತು ಅರ್ಪಣೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ಶ್ರೀ ಸೋಮೇಶ್ವರ ಪ್ರತಿಷ್ಠಾನ, ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆ, ಸರಸ್ವತಿ ನಗರದ ನಾಗರಿಕ ಹಿತರಕ್ಷಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 2019-20 ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 33 ನೇ ವಾರ್ಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನೆಯಿಂದ ನಮ್ಮಲ್ಲಿರುವ ಅದ್ಭುತವಾದ ಸಾಮರ್ಥ್ಯ ಮತ್ತು ಚೈತನ್ಯದ ಅರಿವಾಗುವುದು. ಅರ್ಪಣೆಯಂದ ನಮ್ಮ ಸುತ್ತಲಿನ ಸಮಾಜ ಉಪಕೃತವಾಗುವುದು. ನಮಗೆ ಇಲ್ಲಿ ದೊರಕುವುದೆಲ್ಲವೂ ಈ ಲೋಕದ ಸಂಪತ್ತು. ಅದನ್ನು ಈ ಲೋಕಕ್ಕೆ ಅರ್ಪಿಸದೇ ಹೋಗುವುದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗುತ್ತದೆ ಎಂದರು.
ವ್ಯಕ್ತಿ ಅಥವಾ ಸಂಸ್ಥೆಗಳು ಮಾಡುವ ಇಂಥಹ ಒಳ್ಳೆಯ ಕಾರ್ಯಗಳು ಮತ್ತು ಸಮಾಜಸೇವೆ ಜನೋಪಯೋಗಿಯಾಗಬೇಕು. ಆಗ ನಮ್ಮ ಹುಟ್ಟಿಗೆ ಕೃತಾರ್ಥತೆ ಸಿಗಲಿದೆ. ಆದ್ದರಿಂದ ಸಾಧನೆ ಮತ್ತು ಅರ್ಪಣೆ ಬಹುಮುಖ್ಯ ಎಂದು ತಿಳಿಸಿದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅವರು ಮಾತನಾಡಿ ವಾರ್ಡ್ ಮಟ್ಟದಲ್ಲಿ ಯಾವುದೇ ಜಾತಿ, ಧರ್ಮ ಬೇಧವಿಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಎರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಈ ಕಾರ್ಯಕ್ರಮ ಆಯೋಜಿಸಿದ ಕೆ.ಎಮ್.ಸುರೇಶ್ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಾಗರಿಕರಾದ ಶಾಂತಪ್ಪ ಪೂಜಾರಿ, ಎಮ್.ಬಿ.ಪೂಜಾರಿ, ಹೆಚ್.ಹೆಚ್.ಮಲ್ಲಿಕಾರ್ಜುನಪ್ಪ, ಜಯಕುಮಾರ್, ಗುರುರಾಜ್ ಭಾಗವತ್ ಹಾಗೂ ಶಿಕ್ಷಕರುಗಳಾದ ಸೈಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಜ್ಯೋತಿ ಎನ್ ಉಪಾಧ್ಯಾಯ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಬಿ.ಎಮ್.ಗದಿಗೇಶ್, ಡಯಟ್ ಉಪನ್ಯಾಸಕರಾದ ಎಮ್.ಸೋಮಶೇಖರ್, ಸೋಮೇಶ್ವರ ವಿದ್ಯಾಲಯದ ಸಹ ಶಕಕ್ಷಕರಾದ ಕೋಮಲ, ಕೆ.ಎಸ್.ಎಸ್.ಶಿಕ್ಷಣ ಸಂಸ್ಥೆಯ ಹೆಚ್. ಆರ್. ದಾಕ್ಷಾಯಣಿ, ರಾಷ್ಟ್ರೋತ್ತಾನ ವಿದ್ಯಾ ಕೇಂದ್ರದ ಎಸ್.ಆರ್.ರೇಣುಕಾ ಅವರ ಸೇವೆ ಗುರುತಿಸಿ ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ 32 ವಿದ್ಯಾರ್ಥಿಗಳು ಮತ್ತು ಪಿ.ಯು.ಸಿ. ವಿಭಾಗದಲ್ಲಿ 15 ವಿದ್ಯಾರ್ಥಿಗಳಿಗೆ ಅವರ ವಿಶಿಷ್ಠ ಸಾಧನೆಗಾಗಿ ಅಭಿನಂದಿಸಿ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ. ಎಮ್. ಸುರೇಶ್, ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವ ಎನ್ನುವ ಸಿದ್ದಾಂತದಂತೆ ಸದ್ಯಕ್ಕೆ ಈ ಅಭಿನಂದನಾ ಕಾರ್ಯಕ್ರಮವನ್ನು 33ನೇ ವಾರ್ಡಿಗೆ ಸೀಮಿತವಾಗಿ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತಾರಗೊಳಿಸುವ ಯೋಜನೆಯಿದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಅಭಿನಂದನೆ ಕಾರ್ಯಕ್ರಮವನ್ನು ನಿಟುವಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರಾಧಾ ಎಮ್.ರೇವಣಸಿದ್ದಪ್ಪ, ಪಿ.ಯು.ಸಿ. ವಿದ್ಯಾರ್ಥಿಗಳ ಅಭಿನಂದನೆಯನ್ನು ಸೈಂಟ್ ಜಾನ್ಸ್ ಪ್ರೌಢ ಶಾಲೆ ದೈಹಿಕ ಶಿಕ್ಷಕ ಎಸ್.ನಾಗರಾಜ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಉದ್ಯೋಗಿ ಮತ್ತು ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ನಡೆಸಿಕೊಟ್ಟರು. ಸ್ವಾಗತವನ್ನು ಸರಕಾತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಗಂಗಾಧರ ಹಿರೇಮಠ ಅವರು ಮತ್ತು ಧನ್ಯವಾದ ಸಮರ್ಪಣೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಹೆಚ್.ಎಸ್.ಚಂದ್ರ ನಿರ್ವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆಯ ಅಧ್ಯಕ್ಷರಾದ ಎಸ್.ಟಿ.ಸೋಮಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಉಪ ಮೇಯರ್ ಸೌಮ್ಯಾ ನರೇಂದ್ರಕುಮಾರ್, ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿಗಳಾದ ಕೆ.ಎಮ್.ಸುರೇಶ್, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಬಿ.ಜೆ.ಪಿ. ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಎನ್.ಹನುಮಂತ ನಾಯ್ಕ್, ಮಹಾನಗರ ಪಾಲಿಕೆ ಸದಸ್ಯರುಗಳಾದ 33 ನೇ ವಾರ್ಡಿನ ಕೆ.ಎಮ್.ವೀರೇಶ್, 34 ನೇ ವಾರ್ಡಿನ ಎಸ್.ಮಂಜುನಾಥ ನಾಯ್ಕ್, ಪಿ.ಎಸ್.ಬಸವರಾಜ್, ಕಾಂಗ್ರೇಸ್ ಮುಖಂಡರಾದ ಹುಲ್ಲುಮನೆ ಗಣೇಶ್, ಕೆ.ರಾಘವೇಂದ್ರ ನಾಯರಿ, ಪವಾಡಪ್ಳ ತಿಪ್ಪೇಸ್ವಾಮಿ, ಪ್ರೊ.ಗಂಗಾಧರ ಹಿರೇಮಠ, ಅಶ್ವಥ್ ನಾರಾಯಣ್, ಸೋಮೇಶ್ವರ ವಿದ್ಯಾಲಯದ ಮುಖ್ಯ ಶಿಕ್ಷಕಿ ಪ್ರಭಾವತಿ ಮತ್ತು ಆಡಳಿತಾಧಿಕಾರಿ ಹರೀಶ್ ಬಾಬು ಮತ್ತಿತರರು ಭಾಗವಹಿಸಿದ್ದರು.