ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಮೂರು ಸಚಿವರ ಖಾತೆಯನ್ನು ಅದಲು ಬದಲು ಮಾಡಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಚಿವ ಶ್ರೀರಾಮುಲು ಬಿಗ್ ಶಾಕ್ ನೀಡಿ ವಿ.ಎಸ್ ವೈ ಎರಡು ಖಾತೆಯನ್ನು ವಾಪಸ್ ಪಡೆದು ಒಂದು ಖಾತೆಯನ್ನು ಮಾತ್ರ ನೀಡಲಾಗಿದೆ.
ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ವಾಪಸ್ ಪಡೆಯಲಾಗದ್ದು, ಡಿಸಿಎಂ ಗೋವಿಂದ್ ಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಇಲಾಖೆಯನ್ನು ಶ್ರೀರಾಮುಲುಗೆ ನೀಡಲಾಗಿದೆ. ಇದರೊಂದಿಗೆ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಡಾ.ಕೆ. ಸುಧಾಕರ್ ಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಸುಧಾಕರ್ ಇದಕ್ಕೂ ಮೊದಲು ವೈದ್ಯಕೀಯ ಶಿಕ್ಷಣ ಖಾತೆಯನ್ನು ನಿರ್ವಹಿಸುತ್ತಿದ್ದರು.

ಇನ್ನು ಗೋವಿಂದ್ ಕಾರಜೋಳ ಅವರ ಬಳಿ ಇದ್ದ ಕೋಕೋಪಯೋಗಿ ಖಾತೆ ಜೊತೆ ಇದ್ದ ಸಮಾಜ ಕಲ್ಯಾಣ ಇಲಾಖೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಇನ್ನು ರಾಮುಲು ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಇಲಾಖೆಯನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಕೊರೊನಾ ನಿರ್ವಹಣೆ ದೃಷ್ಠಿಯಲ್ಲಿ ಶ್ರೀರಾಮುಲು ಮತ್ತು ಡಾ.ಕೆ. ಸುಧಾಕರ್ ನಡುವೆ ಹೊಂದಾಣಿಕೆ ಆಗದ ಕಾಣದ ಹಿನ್ನೆಲೆ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸ್ವತಃ ವೈದ್ಯರಾಗಿರುವ ಸುಧಾಕರ್ ವೈದ್ಯಕೀಯ ಶಿಕ್ಷಣ ಖಾತೆ ಜೊತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬುದು ನಿರೀಕ್ಷೆಯಿಂದ ಸಿಎಂ ಇಂತಹ ನಿರ್ಧಾರ ಕೈಗೊಂಡಿದ್ದಾರೆ.



