ದುಬೈ: ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನ 21ಆಟಗಾರರು ದುಬೈ ತಲುಪಿದರು. ಐಪಿಎಲ್ ಶನಿವಾರದಿಂದ ಆರಂಭವಾಗಲಿದೆ.
ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಜೋಫ್ರಾ ಆರ್ಚರ್ ಹಾಗೂ ಜೋಸ್ ಬಟ್ಲರ್ ಸೇರಿದಂತೆ ಒಟ್ಟು 21 ಆಟಗಾರರು ಇಂಗ್ಲೆಂಡ್ನಿಂದ ವಿಶೇಷ ವಿಮಾನದ ಮೂಲಕ ದುಬೈ ತಲುಪಿದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಬುಧವಾರವಷ್ಟೇ ಮುಕ್ತಾಯವಾಗಿತ್ತು.
ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಅಬುಧಾಬಿಯಲ್ಲಿವೆ. ಇನ್ನುಳಿದ ಆರೂ ತಂಡಗಳು ದುಬೈನಲ್ಲಿ ತಂಗಿವೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಯುಎಇ ಅಧಿಕಾರಿಗಳೊಂದಿಗೆ ಚರ್ಚಿಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರ ಕ್ವಾರಂಟೈನ್ ಅವಧಿಯಲ್ಲಿ ವಿನಾಯಿತಿ ಕೊಡಿಸಿದ್ದಾರೆ.



