ಇನ್ಮುಂದೆ  ಮಹಿಳೆಯರ ರಕ್ಷಣೆಗೆ ನಗರದಲ್ಲಿ ಸಂಚರಿಸಲಿದೆ ದುರ್ಗಾ ಪಡೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಇವರೆಲ್ಲಾ ನೋಡೋಕೆ  ಸ್ಮಾರ್ಟ್ ಆಗಿ ಇರಬಹುದು. ಇವರು ಅಖಾಡಕ್ಕೆ ಇಳಿದರೆ  ದುರ್ಗಿಯರು.  ಮಹಿಳೆಯರಿಗೆ ಹಿಂಸೆ ನೀಡುವರನ್ನು ಕಂಡರೆ ಕೆರಳಿ, ಕ್ಷಣ ಮಾತ್ರದಲ್ಲೇ ಅಟ್ಯಾಕ್ ಮಾಡಿ ಗೂಸಾ ಕೊಟ್ಟು ಲಾಕಪ್ ಗೆ ಕಳುಹಿಸುತ್ತಾರೆ. ಇವ್ಯಾರಪ್ಪ ನಮ್ಮ ದಾವಣಗೆರೆಯಲ್ಲಿ ಹೊಸದಾಗಿ ಬಂದಿದ್ದಾರೆ ಅಂತೀರಾ… ಇವರೇ ನಿರ್ಭಾಯ ಹೆಸರಿನ ದುರ್ಗಾಪಡೆಯ ವಿಶೇಷ ಮಹಿಳಾ ಪೊಲೀಸ್…

durga dvgsuddi 2

ನಗರದ ಜಯದೇವವೃತ್ತದಲ್ಲಿ ಜಿಲ್ಲಾ ಪೊಲೀಸ್ನ ನಿರ್ಭಾಯ ಪಡೆ ಹೆಸರಿನ ದುರ್ಗಾಪಡೆಗೆ  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಚಾಲನೆ ನೀಡಿದರು.

ನಗರದ ಕಾಲೇಜು,  ಬಸ್ ನಿಲ್ದಾಣ, ಪಾರ್ಕ್, ಮಾರುಕಟ್ಟೆ ಸೇರಿದಂತೆ ಮಹಿಳೆ ಮತ್ತು ಮಕ್ಕಳು ಸಂಚರಿಸುವ ಸ್ಥಳಗಳಲ್ಲಿ ದುರ್ಗಾ ಪಡೆ ಗಸ್ತು ತಿರುಗಲಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ಕಿರುಕುಳ ದೌರ್ಜನ್ಯವನ್ನು ತಡೆಗಟ್ಟಲಿದೆ.

ದುರ್ಗಾ ಪಡೆಯ ಉದ್ದೇಶಗಳು

  • ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವುದು
  • ಮಕ್ಕಳು ಮತ್ತು ಮಹಿಳೆಯರನ್ನು ಚುಡಾಯಿಸುವುದನ್ನು ತಡೆಯುವುದು
  • ಸೌಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವುದು
  • ಡ್ರಗ್ಸ್ ಸೇವನೆ ಮತ್ತು ಮಾರಾಟ ತಡೆಯುವುದು.
  •  ಅನಾಥ ಮತ್ತು ನಿರ್ಗತಿಕ ಮಕ್ಕಳ ರಕ್ಷಣೆ ಮಾಡುವುದು.

15  ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ಈ ದುರ್ಗಾ ಪಡೆಗೆ ಗಾಂಧಿ ಜಯಂತಿ ದಿನದಂದೇ ಚಾಲನೆ ನೀಡಲಾಗಿದ್ದು ವಿಶೇಷ.  ಈ ತಂಡದಲ್ಲಿ ಮಹಿಳಾ ಎಎಸ್ಐ ಇರಲಿದ್ದು,. ಜೊತೆಗೆ ಮಹಿಳಾ ಪೊಲೀಸ್ ಇನ್ಸ್ ಪೆಕ್ಟೆರ್ ನಾಗಮ್ಮ ಅವರ ಮಾರ್ಗದರ್ಶನದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ.

ಮಹಿಳೆಯರು ಮತ್ತು ಮಕ್ಕಳಿಗೆ ಸಾಕಷ್ಟು ರಕ್ಷಣೆ, ಆತ್ಮವಿಶ್ವಾಸ ತುಂಬುವ ಪ್ರಯತ್ನಕ್ಕೆ ಈ ಪಡೆ ಮುಂದಾಗಿದ್ದು, ಗಸ್ತು ತಿರುಗಲು ಸುಸಜ್ಜಿತವಾದಂತ ವಾಹನ ಕೂಡ ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದವರಿಗೆ ಕಠಿಣ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರ ಹನುಮಂತರಾಯ ಹೇಳಿದರು.

durga dvgsuddi 3

ದುರ್ಗಾ ಎಂಬ ಪದದಲ್ಲಿದೆ ಶಕ್ತಿ, ಈ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆಗ ಮಹಿಳೆಯರು ಮತ್ತು ಮಕ್ಕಳು ಹೊರಗಡೆ ಯಾವುದೇ ಭಯವಿಲ್ಲದೆ ಓಡಾಡಬಹುದಾಗಿದೆ  ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್  ತಿಳಿದರು.

ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ನಾಗಮ್ಮ ಮಾತನಾಡಿ,ಬೆಳಗ್ಗೆ ಮತ್ತು ಸಂಜೆ ತಲಾ 7 ಕಡೆ ಸಂಚರಿಸಲಿದ್ದು, ಇಬ್ಬರು ಸಿಬ್ಬಂದಿಗಳು ಒಟ್ಟಾಗಿ ಸೇರಿ ಶಾಲಾ ಕಾಲೇಜುಗಳು, ಹಾಸ್ಟೆಲ್ ಬಳಿ ಸೇರಿದಂತೆ ಇತರೆ ಕಡೆ ಸಂಚರಿಸಿ ತೊಂದರೆ ಎಲ್ಲಿದೆ ಎಂಬುದನ್ನು ಗುರುತಿಸುವ ಕೆಲಸ ಮಾಡಲಿದೆ.

ಶಾಲಾ ಕಾಲೇಜುಗಳಲ್ಲಿ ದೂರು ನೀಡುವ ಪೆಟ್ಟಿಗೆಯನ್ನು ಸಹ ಇಡಲಾಗಿದ್ದು, ಹಾಗೇನಾದರು ತೊಂದರೆಯನ್ನು ತಿಳಿಸಲು ನೇರವಾಗಿ ದೂರು ನೀಡಲಾಗದ್ದಿದ್ದರೆ ಈ ಬಾಕ್ಸ್ ನಲ್ಲಿ ದೂರಿನ ಚೀಟಿಯನ್ನು ಹಾಕಬಹುದಾಗಿದೆ. ಮಹಿಳೆ ಮತ್ತು ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ 100 ಮತ್ತು ಮಹಿಳಾ ಪೊಲೀಸ್ ಠಾಣೆ  08192 253088 ದೂರವಾಣಿಗೆ ಸಂಪರ್ಕಿಸಬಹುದು. ಈ ವೇಳೆ ದುರ್ಗಾ ಪಡೆಯ ಮಹಿಳೆಯರ ಮೇಲೆ ಪುಂಡರು ದಾಳಿ ಮಾಡಿದಾಗ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *