ಡಿವಿಜಿ, ಸುದ್ದಿ, ಬೆಂಗಳೂರು: ಡ್ರಸ್ ಮಾಫಿಯಾ ವಿಚಾರವಾಗಿ ನಾವು ಯಾವುದೇ ರೀತಿಯ ಹೇಳಿಕೆ ಕೊಡುವಂತಿಲ್ಲ. ಈ ಬಗ್ಗೆ ನಾವು ಸಿಸಿಬಿ ಪೊಲೀಸರ ನಿಯಮಗಳನ್ನ ಪಾಲಿಸುತ್ತಿದ್ದೇವೆ ಎಂದ ನಟಿ ಐಂದ್ರಿತಾ ರೇ ಹೇಳಿದ್ದಾರೆ.
ದಿಗಂತ್ ಮತ್ತು ಐಂದ್ರಿತಾ ಸಿಸಿಬಿಗೆ ವಿಚಾರಣೆಗೆ ಹಾಜರಾಗಿದ್ದರು. ಇಂದು ಬೆಳಗ್ಗೆ ಮನೆಯ ಬಾಲ್ಕನಿಗೆ ಅತ್ತೆ ಜೊತೆ ಬಂದ ಐಂದ್ರಿತಾ ರೇ, ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಪೊಲೀಸರ ತನಿಖೆ ಸಹಕಾರ ನೀಡುವುದು ನಮ್ಮ ಕರ್ತವ್ಯ. ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇವೆ. ಸಿಸಿಬಿ ನಿಯಮಗಳ ಪಾಲನೆ ಮಾಡುತ್ತಿದ್ದೇವೆ. ಮಾಧ್ಯಮ ಜೊತೆ ಮಾತನಾಡುವಂತಿಲ್ಲ ಎಂದರು.
ಪ್ರಕರಣ ಸದ್ಯ ವಿಚಾರಣೆ ಹಂತದಲ್ಲಿರುವದರಿಂದ ಬೆಂಗಳೂರು ತೊರೆಯುವಂತಿಲ್ಲ ಎಂದು ಸಿಸಿಬಿ ನೀಡಿದೆ ಎನ್ನಲಾಗಿದೆ. ಮಾರಿಗೋಲ್ಡ್ ಸಿನಿಮಾ ಚಿತ್ರೀಕರಣದಲ್ಲಿ ದಿಗಂತ್ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯಿಂದ ಸಿನಿಮಾಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗುತ್ತಿದೆ.



