ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು,ಇಂದು ಬರೋಬ್ಬರಿ 297 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12189ಕ್ಕೆ ಏರಿಕೆಯಾಗಿದೆ.
ಇಂದು ಕೊರೊನಾದಿಂದ 244 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 9213 ಮಂದಿ ಗುಣಮುಖರಾಗಿದ್ದಾರೆ. ಇಂದು ಕೊರೊನಾದಿಂದ 3 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯ 223ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 2753 ಸಕ್ರಿಯ ಪ್ರಕರಣಗಳಿವೆ.
ಇಂದು ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ ಅಧಿಕ 118, ಹರಿಹರ 60, ಜಗಳೂರು 13, ಚನ್ನಗಿರಿ 49, ಹೊನ್ನಾಳಿ 46 ಹಾಗೂ ಇತರೆ ಜಿಲ್ಲೆಯಿಂದ 11 ಪಾಸಿಟಿವ್ ಪತ್ತೆಯಾಗಿದೆ.
ಪಿಜೆ ಬಡಾವಣೆಯ 75 ವರ್ಷದ ವೃದ್ಧ, ಹರಿಹರದ ಜೆಸಿ ಬಡಾವಣೆಯ 73 ವರ್ಷದ ವೃದ್ಧ ಹಾಗೂ ದಾವಣಗೆರೆಯ ನಿಟ್ಟವಳ್ಳಿಯ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.



