ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಬೈಕ್ ಕಳ್ಳರಿಂದ 4 ಲಕ್ಷ ಮೌಲ್ಯದ 10 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಬ್ಬ ಬಾಲಾಪರಾಧಿ ಸಹಿತ 4 ಮಂದಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ 4 ಲಕ್ಷ ಮೌಲ್ಯದ 10 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಬ್ಬ ಬಾಲಾಪರಾಧಿ ಸಹಿತ ನಾಲ್ಕು ಮಂದಿ ಸೇರಿಕೊಂಡು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿಸಿದರು.

ಗಾಂಧಿನಗದಲ್ಲಿ 2 , ಕೆಟಿಜೆನಗರ 03, ಹರಿಹರ 2 ಹಾಗೂ ಅಜಾದ್ ನಗರ ವ್ಯಾಪ್ತಿಯಲ್ಲಿ 3 ಬೈಕ್ ಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಟಿಜೆನಗರ ಪಿಎಸ್ ಐ ಅಬ್ದುಲ್ ಖಾದರ್ ಜಿಲಾನಿ ಗೀತಾಂಜಲಿ ಟಾಕೀಸ್ ಬಳಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಈರುಳ್ಳಿ ಮಾರುಕಟ್ಟೆ ಕಡೆಯಿಂದ ಇಬ್ಬರು ಬೈಕಿನಲ್ಲಿ ಬರುತ್ತಿದ್ದರು. ಪೊಲೀಸ್ ವಾಹನ ನೋಡಿದ ತಕ್ಷಣ ಬೈಕ್ ಅನ್ನು ತಿರುಗಿಸಿ ಹೋಗಲು ಯತ್ನಿಸಿದರು. ಆಗ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಇಳಿದು ಓಡಿ ಹೋದ. ಬೈಕ್ ನಲ್ಲಿದ್ದ ವ್ಯಕ್ತಿಯನ್ನು ಚೇಜ್ ಮಾಡಿ ಹಿಡಿಯದು ವಿಚಾರಣೆಗೆ ಒಳಪಡಿಸಿದಾಗ , ಆತ ಬಾಲಾಪರಾಧಿ ಎಂದು ತಿಳಿಯಿತು. ತಾನು ಸೇರಿದಂತೆ ಮೂವರು ಸೇರಿಕೊಂಡು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಲಾಪರಾಧಿ ಕೊಟ್ಟ ಮಾಹಿತಿ ಮೇರೆಗೆ ಇತರೆ ಮೂರು ಆರೋಪಿಗಳಾದ ಖಲಂದರ್ (20), ರೆಹಮಾನ್ (21) ನಯಿಂಖಾನ್ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.



