ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹವಾಮಾನ ಇಲಾಖೆ ದಾವಣಗೆರೆ ಜಿಲ್ಲೆಯಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಇಂದು ಕೂಡ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಮಂಗಳವಾರ ರಾತ್ರಿ ಜಗಳೂರು ತಾಲ್ಲೂಕಿನಲ್ಲಿ ಸುರಿದ ಮಳೆಗೆ ತಾಲ್ಲೂಕಿನ ಸಾಲಹಳ್ಳಿ, ಹೀರೇಮಲ್ಲನ ಹೊಳೆಯ ಹಳ್ಳ ಭರ್ತಿಯಾಗಿ ಹರಿಯುತ್ತಿದೆ.
https://www.facebook.com/permalink.php?story_fbid=324342105659338&id=105586904201527
ಹರಿಹರ ತಾಲ್ಲೂಕಿನಲ್ಲಿಯೂ ಕೂಡ ಭಾರೀ ಮಳೆ ಬಂದಿದ್ದು, ಬೆಳಕೆರೆ ಡ್ಯಾಂ ತುಂಬಿ ಹರಿಯುತ್ತಿದೆ. ಮಳೆಯ ನೀರಿನಿಂದ ಸಂಕ್ಲಿಪುರ- ಗುಳದಹಳ್ಳಿ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ತುಂಬಿ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ವ್ಯವಸ್ಥೆ ಸ್ಥಗಿತವಾಗಿತ್ತು.
https://www.facebook.com/permalink.php?story_fbid=324348602325355&id=105586904201527

ಮಾಯಕೊಂ ತಾಲ್ಲೂಕಿನ ಒಡೆಯರಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಇದ್ದ ಸಾಮಾಗ್ರಿಗಳು ನೀರುಪಾಲಾಗಿದೆ. ಇಲ್ಲಿನ ನಿವಾಸಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.facebook.com/permalink.php?story_fbid=324344118992470&id=105586904201527
ದಾವಣಗೆರೆ ತಾಲೂಕು ಭಾವಿಹಾಳ್ ಗ್ರಾಮದಲ್ಲಿ ಜಲಾವೃತವಾದ ಹಿನ್ನಲೆ ಕಾರೊಂದು ಕೊಚ್ಚಿಹೋದ ಘಟನೆ ನಡೆದಿದೆ. ಕಾರು ಚಾಲನೆ ಮಾಡಿಕೊಂಡು ಬರುವ ವೇಳೆ ದಾರಿ ಕಾಣದೆ ಹಳ್ಳಕ್ಕೆ ಇಳಿಸಿದ್ದೇನೆ. ಕಾರು ಹಳ್ಳಕ್ಕೆ ಬೀಳುತ್ತಿದ್ದಂತೆ ಕಾರಿನಿಂದ ಜಿಗಿದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ.
https://www.facebook.com/permalink.php?story_fbid=324351908991691&id=105586904201527



