ಜ್ಯೋತಿಷ್ಯ
ರಾಶಿ ಭವಿಷ್ಯ.
ಶುಭ ಬುಧವಾರ-ಸೆಪ್ಟೆಂಬರ್-09,2020 ರಾಶಿ ಭವಿಷ್ಯ
- ಸೂರ್ಯೋದಯ: 06:12, ಸೂರ್ಯಸ್ತ: 18:21
- ಶಾರ್ವರಿ ನಾಮ ಸಂವತ್ಸರ
- ಭಾದ್ರಪದ ಮಾಸ ದಕ್ಷಿಣಾಯಣ
- ತಿಥಿ: ಸಪ್ತಮೀ – 26:05+ ವರೆಗೆ
- ನಕ್ಷತ್ರ: ಕೃತ್ತಿಕ – 11:15 ವರೆಗೆ
- ಯೋಗ: ಹರ್ಷಣ – 18:17 ವರೆಗೆ
- ಕರಣ: ವಿಷ್ಟಿ – 13:07 ವರೆಗೆ ಬವ – 26:05+ ವರೆಗೆ
- ದುರ್ಮುಹೂರ್ತ: 11:52 – 12:41
- ರಾಹು ಕಾಲ: 12:00- 13:30
- ಯಮಗಂಡ: 07:30 – 09:00
- ಗುಳಿಕ ಕಾಲ: 10:30 – 12:00
- ಅಮೃತಕಾಲ: 08:30 – 10:00
- ಅಭಿಜಿತ್ ಮುಹುರ್ತ: ಇಲ್ಲ
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಜನನ ಹಾಗೂ ಮರಣ ದೈವಾನುಗ್ರಹ ಹಾಗೆಯೇ ಮೂಲ ನಕ್ಷತ್ರದಲ್ಲಿ ಹೆಣ್ಣಾಗಲಿ ಗಂಡಾಗಲಿ ಜನನವಾದರೆ ಅವರವರ ಶಕ್ತಿ ಅನುಸಾರವಾಗಿ ದೋಷ ನಿವಾರಣೆ ಪೂಜಾ ಮಾಡಿಸಿಕೊಳ್ಳಬೇಕು. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ದೋಷ ಅಂಟುವುದು ಎಂಬುದರ ಬಗ್ಗೆ ಮಾಹಿತಿ ನೋಡೋಣ.
(1) ಮೂಲ ನಕ್ಷತ್ರದಲ್ಲಿ ಜನಿಸಿದರೆ ತಂದೆಗೆ ಸಮಸ್ಯೆಗೆ ಒಳಗಾಗುವ ಸಂಭವ.
(2) ಮೂಲಾ ನಕ್ಷತ್ರದಲ್ಲಿ 4ನೇ ಚರಣದಲ್ಲಿ ಜನಿಸಿದರೆ ಯಾವುದೇ ದೋಷ ಇರುವುದಿಲ್ಲ.
ಇದಕ್ಕಾಗಿ ಹಸು ಹಾಗೂ ಪುರೋಹಿತರನ್ನು ಕರೆದು ಪೂಜೆ ಸಲ್ಲಿಸಿ ಪುರೋಹಿತರಿಗೆ ನವಧಾನ್ಯ ,ವಸ್ತ್ರ ದಾನ ಮಾಡಬೇಕು. ಅದರ ಜೊತೆಗೆ ಹಸುವಿನ ಪೂಜೆ ಮಾಡಬೇಕು ಇದರಿಂದ ಮುಕ್ತಿ.
ಆರ್ಥಿಕವಾಗಿ ಉಳ್ಳವರು ನಕ್ಷತ್ರ ಹೋಮ ಶಾಂತಿ ಮಾಡಬಹುದು.
ಆರ್ಥಿಕಸ್ಥಿತಿ ಉತ್ತಮವಾಗಿದ್ದರೆ ಗೋದಾನ ಮಾಡಬಹುದು. ನನ್ನದನ್ನು ಮಾಡಬಹುದು.
ವಿವಾಹ ಕಾರ್ಯಕ್ಕೆ ಮೂಲ ನಕ್ಷತ್ರ ಅಡ್ಡಿಯೆ?
ಹೌದು ಮದುವೆ ವಿಳಂಬವಾಗುವ ಸಾಧ್ಯತೆ ಇರುತ್ತದೆ, ಅದಕ್ಕಾಗಿ ತಾವು ಸದಾ ಪೂಜೆ-ಪುನಸ್ಕಾರ ಅನ್ನದಾನ ಮಾಡಿ ಮುಕ್ತಿ ಹೊಂದಿರಿ ಇದಕ್ಕಾಗಿ
ಸಂಬಂಧಿಸಿದಂತೆ ತೊಂದರೆಗಳು ಆಗುತ್ತಿದ್ದಲ್ಲಿ ಈ ಮಂತ್ರ ಪಠಿಸಿರಿ. “ಓಂ ಹ್ರೀಂ ಸ್ವಯಂವರಪಾರ್ವತಿ ಜಪಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗ ಭಯಂಕರಿ ಸಕಲ ಸ್ಥಾವರಸ್ಯ ಜಂಗಮ ಮುಖ ಹೃದಯಂ ಮಮ ವಶಂ ಆಕರ್ಷಯ ಆಕರ್ಷಯ” ಈ ಮಂತ್ರವನ್ನು ನಿತ್ಯ ಜಪ ಮಾಡಿದರೆ ಎಷ್ಟು ದೊಡ್ಡ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಶೀಘ್ರ ವಿವಾಹ ಆಗುತ್ತದೆ.
ಸೋಮಶೇಖರ್ ಪಂಡಿತರುB.Sc
ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
________
ಮದುವೆ ಅಥವಾ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು…….
ಮದುವೆ ನಿರ್ಧರಿಸುವಾಗ ಅವರಮುಂದೆ ಗಂಡು-ಹೆಣ್ಣು ಕೂಡಿಸಿ ಮನದಾಳದ ಅಭಿಪ್ರಾಯ ಖಚಿತಪಡಿಸಿಕೊಳ್ಳಬೇಕು ನಂತರ ವಧುವಿನ ಜಾತಕ ಪರೀಕ್ಷಿಸಬೇಕು.ಇಬ್ಬರ ಜಾತಕ ಪರೀಕ್ಷಿಸಬೇಕು. ನಂತರ ಜಾತಕ ಹೊಂದಾಣಿಕೆ ಆದಮೇಲೆ ಮದುವೆ ನಿರ್ಧಾರ ಆಗುತ್ತದೆ.
(1) ಜಾತಕ ತಾಳೆ ಅಂದರೆ ಹೊಂದಾಣಿಕೆ ಬಗ್ಗೆ ಮಾಹಿತಿ.
ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರಬೇಕು. ವಧು-ವರರ ಜಾತಕದಲ್ಲಿ ಗರಿಷ್ಠ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಶುಭ ಎಂದು ತಿಳಿಸಲಾಗುತ್ತದೆ. ಜಾತಕದಲ್ಲಿ ಗಣ,ಮೈತ್ರಿ ಮತ್ತು ನಾಡಿ ದೋಷ ಇರಬಾರದು. ವಧು-ವರರ ರಾಶಿ ಒಂದೇ ಇದ್ದರೆ, ಅವರ ದಾಂಪತ್ಯ ಜೀವನ ಮಧುರ ಜೇನುತುಪ್ಪ ಸೇವಿಸಿ ಹಾಗೆ ಇರುತ್ತದೆ. ಅಷ್ಟೇ ಅಲ್ಲ ಅವರ ರಾಶಿ ಒಂದೇ ಆಗಿದ್ದರೆ ಒಳ್ಳೆಯದು. ವಧು ವರರ ರಾಶಿ ಲಗ್ನ ಒಂದೇ ಆಗಿದ್ದರೆ ಒಳ್ಳೆಯದು. ರಾಶಿ ಒಂದೇ ಆಗಿದ್ದರೆ ನಕ್ಷತ್ರ ಬೇರೆ ಇರಬೇಕು. ಒಂದು ವೇಳೆ ನಕ್ಷತ್ರ ಒಂದೇ ಆದರೂ ಚರಣ ( ಪಾದ) ಬೇರೆ ಇರಬೇಕು.
(2). ವಧು-ವರರ ಜಾತಕದಲ್ಲಿ ದೋಷದ ವಿಚಾರದ ಮಾಹಿತಿ.
ವಧು ವರರ ಜಾತಕ ಹೊಂದಾಣಿಕೆ ಆದಮೇಲೆ ಅದರಲ್ಲಿ ಲೋಪದೋಷದ ಬಗ್ಗೆ ಅರಿಯಬೇಕು. ಇದನ್ನೆಲ್ಲ ಪರಿಗಣಿಸಿ ಮದುವೆಗೆ ಸೂಕ್ತ.
_________
ಇಂದಿನ ರಾಶಿ ಭವಿಷ್ಯ
_________
ಮೇಷ ರಾಶಿ: ಮಕ್ಕಳ ಮಂಗಳ ಕಾರ್ಯ ಮಾತುಕತೆ ಸಾಧ್ಯತೆ. ಆಸ್ತಿ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ. ವ್ಯಾಪಾರದಿಂದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿಮ್ಮ ಆಲಸ್ಯದ ಕಾರಣ ಕೆಲಸಕಾರ್ಯಗಳಲ್ಲಿ ಮೇಲಾಧಿಕಾರಿ ಇಂದ ಕಿರಿಕಿರಿ ಸಂಭವ.
ಆರೋಗ್ಯದ ಸಮಸ್ಯೆ ಇಂದ ವೈದ್ಯರ ಸಲಹೆ ಅನಿವಾರ್ಯವಾಗಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರು ಮತ್ತು ಕಚೇರಿಯ ಸಹೋದ್ಯೋಗಿಗಳೊಡನೆ ಹೊರಬಂದು ಪ್ರಕೃತಿಯನ್ನು ಆನಂದಿಸುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಷಭ ರಾಶಿ: ಮಕ್ಕಳ ಸರ್ಕಾರಿ ನೌಕರಿ ವಿಷಯದಲ್ಲಿ ಹರ್ಷದ ವಾರ್ತೆ ಕೇಳುವಿರಿ. ಮನದಾಳದ ಮಾತುಗಳು ಯಾರೆದುರೂ ಹೇಳದಿರಿ. ಗೊತ್ತಿಲ್ಲದ ಕೆಲಸಕ್ಕೆ ಕೈಹಾಕಿ ತೊಂದರೆ ಮಾಡಿಕೊಳ್ಳುವಿರಿ. ಚಾಡಿ ಮಾತು ಹೇಳಲು ಹೋಗಿ ಸಿಕ್ಕಿಹಾಕಿಕೊಳ್ಳುವಿರಿ. ಇಂದು ನಿಮಗೆ ಹಣ ಗಳಿಸುವ ಬಹಳ ಶುಭ ದಿನ. ನಿಮ್ಮ ಕುಟುಂಬದ ವಾತಾವರಣವು ಸಂತೋಷದಲ್ಲಿ ತೇಲುತ್ತದೆ. ತುಂಬು ಕುಟುಂಬ ಸಂತೋಷದಿಂದ ತುಂಬಿ ಆಸ್ತಿ ವಿಚಾರ ಇತ್ಯರ್ಥವಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರದಲ್ಲಿ ತೊಂದರೆ ಇರುತ್ತದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಿಥುನ ರಾಶಿ: ಮಕ್ಕಳ ವಿದ್ಯಾಭ್ಯಾಸ ವಿದೇಶಕ್ಕೆ ಹೋಗುವ ವಿಳಂಬವಾಗುವುದು. ಹಳೆ ಪರಿಚಿತ ಸಂಗಾತಿ ಭೇಟಿ ಸಂಭವ. ನಿಮ್ಮ ವ್ಯಾಪಾರ ಪ್ರಗತಿಯ ಕಡೆಗೆ ಸಾಗುವುದು. ಸಂಗಾತಿಯ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗೆ ಸಿಲುಕುವಿರಿ. ಯಾರಿಗೂ ಹಣಕಾಸಿನ ಗುಟ್ಟನ್ನು ಬಿಟ್ಟು ಕೊಡಬೇಡಿ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಹುದು. ಆರ್ಥಿಕವಾಗಿ ಮೂಲ ಉದ್ಯಮದಿಂದ ಮಾತ್ರ ಪ್ರಯೋಜನ ಪಡೆಯುವಿರಿ. ಪ್ರೇಮಿಗಳು ಇಂದು ಪ್ರೀತಿಯ ಕೊರತೆಯನ್ನು ಇಂದು ಅನುಭವಿಸಬಹುದು.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕಟಕ ರಾಶಿ: ನಿಮ್ಮ ನಿರೀಕ್ಷೆ ಮೀರಿ ಹಣಗಳಿಸಿವಿರಿ. ಬಂಧುಗಳು, ಸ್ನೇಹಿತರ ಸಹಾಯ ಹಸ್ತ ದೊರೆಯುವುದು. ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಂಡು ಬೇರೆ ಕೆಲಸಕ್ಕೆ ಕೈಹಾಕಿ. ಹೆಚ್ಚಿನ ಲಾಭವಾಗಿ ಆಸ್ತಿ ಖರೀದಿ. ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳುವುದು. ಮಧ್ಯಸ್ಥಿಕೆವಹಿಸಿ ಕೊಟ್ಟಿರುವ ಸಾಲಕ್ಕೆ ಸಂದಿಗ್ಧತೆಯನ್ನು ಅನುಭವಿಸುವಿರಿ. ಈ ಕಾರಣದಿಂದಾಗಿ ಯಾರಿಗೂ ಜಮೀನ್ ನೀಡಬೇಡಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಪತ್ನಿಯ ಮಾರ್ಗದರ್ಶನ ಪಡೆಯಿರಿ. ಶತ್ರುಗಳಿಂದ ತೊಂದರೆ ಉಂಟಾಗುತ್ತದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಸಿಂಹ ರಾಶಿ : ಕಚೇರಿಗೆ ಸಂಬಂಧಿತ ದಾಖಲೆಗಳ ಬಗ್ಗೆ ಭೀತಿ. ಮೇಲಾಧಿಕಾರಿಗಳ ಇನ್ಸ್ಪೆಕ್ಷನ್ ಸ್ವಲ್ಪಮಟ್ಟಿನ ಕಿರಿಕಿರಿಯೂ ಎದುರಾಗುತ್ತದೆ. ಮಕ್ಕಳ ಭವಿಷ್ಯ ಕೊರಗು ಕಾಡುವುದಾದರೂ, ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ಅಧ್ಯಾತ್ಮಿಕ ಮತ್ತು ಬರವಣಿಗೆಯ ಕೆಲಸಕ್ಕೆ ಸಂಬಂಧಿಸಿದ ಪ್ರವೃತ್ತಿಯಲ್ಲಿ ನೀವು ಸಕ್ರಿಯರಾಗಿರುತ್ತೀರಿ. ಅಕ್ಕಪಕ್ಕದ ಜನರ ದೃಷ್ಟಿಯಿಂದ ಮಾನಸಿಕ ಆತಂಕದಿಂದ ನೀವು ಇನ್ನೂ ತೊಂದರೆಗೊಳಗಾಗಬಹುದು.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕನ್ಯಾ ರಾಶಿ: ನೀವು ಯೋಜಿಸಿದ ರೀತಿಯಲ್ಲಿಯೇ ಎಲ್ಲವೂ ಕೆಲಸಗಳು ಸರಾಗವಾಗುವುದು. ಮಿತ್ರನಿಗೆ ಸಹಾಯ ಮಾಡಲು ಹೋಗಿ ಕೆಲವು ವಿಶೇಷ ಅನುಭವ ಹೊಂದುವಿರಿ. ಕೊಟ್ಟ ಸಾಲ ಮರಳಿ ಬರದೆ ಸಂಕಷ್ಟ ಎದುರಿಸುವಿರಿ. ಅದಕ್ಕಾಗಿ ಹಿರಿಯರನ್ನು ಕೂಡಿಸಿ ಚರ್ಚಿಸುವುದು. ತುರ್ತುಪರಿಸ್ಥಿತಿ ಆರೋಗ್ಯದಲ್ಲಿ ಸಮಸ್ಯೆ ಗಾಬರಿ ಬೇಡ. ಇಂದು ನೀವು ಸಂದಿಗ್ಧ ಸ್ಥಿತಿಯಲ್ಲಿರುತ್ತೀರಿ. ನಿಮ್ಮ ಹಿತೈಷಿಗಳು ಕೆಲವೊಂದು ವ್ಯವಹಾರವು ನಿಮ್ಮನ್ನು ತೊಂದರೆಗೆ ಸಿಲುಕುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ತುಲಾ ರಾಶಿ: ಬಾಳಸಂಗಾತಿಯ ಕಾಣಿಕೆ ಸ್ವೀಕಾರ. ಮದುವೆ ವಿಷಯ ಸಕಾಲಿಕ ಎಚ್ಚರಿಕೆಯಿಂದ ಒಳಿತಾಗುವುದು. ಜತೆಗೆ ಹಣಕಾಸಿನ ಹರಿವೂ ನಿಮ್ಮತ್ತ ಬರುವುದು. ಮಾತಿನ ವೈಖರಿಯಿಂದ ಜನಾಕರ್ಷಣೆ ಆಗುವರು . ನಿಮ್ಮ ರೂಪ ಮತ್ತು ಒಳ್ಳೆಯ ಮನಸ್ಸಿನಿಂದ ಎಲ್ಲರನ್ನೂ ಸೆಳೆಯುವಿರಿ. ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಮಹಿಳೆಯರು ಮಕ್ಕಳ ಬಗ್ಗೆ ಅತಿಯಾಗಿ ಸಂವೇದನಾಶೀಲ ಆಗುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಚಿಕ ರಾಶಿ: ಸಮಾಜದಲ್ಲಿ ನಿಮ್ಮ ಭಾಷಣದಿಂದ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ಆದರೆ ಸಂಗಾತಿಯ ಆರೋಗ್ಯ ದಲ್ಲಿ ತೊಂದರೆ. ಹಿತಶತ್ರುಗಳು ನಿಮ್ಮ ನೆಮ್ಮದಿ ಕೆಡಿಸುವ ಹುನ್ನಾರದಲ್ಲಿದ್ದಾರೆ. ಜಾಗೃತಿ ವಹಿಸಿ ಕಾರ್ಯದಲ್ಲಿ ತಲ್ಲೀನರಾಗಿ. ಅನಿರೀಕ್ಷಿತ ಧನಲಾಭವಿರುವುದು. ಜವಾಬ್ದಾರಿಗಳಿಗೆ ಹೆದರಿ ಓಡಿಹೋಗಬೇಡಿ.ಹೆಚ್ಚಿನ ಜವಾಬ್ದಾರಿ ನಿಮಗೆ ಸಿಗಲಿದೆ. ರಾಜಕಾರಣಿಗೆ ಪದವಿ ಸ್ಥಾನ ಪ್ರಾಪ್ತಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಧನುಸ್ಸು ರಾಶಿ: ರಾಜಕಾರಣಿಗಳಿಗೆ , ಸಮಾಜ ಕಾರ್ಯಕರ್ತರಿಗೆ ಮಾತೇ ಮುತ್ತು ಮಾತೇ ಶತ್ರು ಎಂಬಂತೆ ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಿರಿ. ದಿನದಿಂದ ದಿನಕ್ಕೆ ಉನ್ನತಿ ಪದವಿ ಹೊಂದುವ ನಿಮ್ಮ ಬಗ್ಗೆ ಇತರರು ಅಸೂಯೆ ಪಡುವರು. ಆ ಬಗ್ಗೆ ಅಷ್ಟದಿಗ್ಬಂದನ ಮಾಡಿಕಳಿಸುವೆ. ಹಿತೈಷಿಗಳು ಶತ್ರುಗಳ ಬಗ್ಗೆ ಚಿಂತೆ ಬೇಡ. ಈ ದಿನ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಇಂದು ನೀವು ಆರೋಗ್ಯ ಸಂಬಂಧಿತ ಎದೆ ನೋವು, ಮಂಡಿ ನೋವು, ಹೊಟ್ಟೆ ನೋವು ಸಮಸ್ಯೆಗಳನ್ನು ಎದುರಿಸಬಹುದು. ಮನಸ್ಸು ಕೂಡ ಚಂಚಲವಾಗಿರುತ್ತದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಕರ ರಾಶಿ: ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದೆ ಆದರೆ ಗೆಲುವು ನಿಮ್ಮದೇ. ಪ್ರತಿಕ್ರಿಯಿಸದೆ ಮೌನವಾಗಿರಿ. ದೂರಪ್ರಯಾಣ ಸದ್ಯಕ್ಕೆ ಬೇಡ. ವ್ಯಾಪಾರ ವೈವಾಟಗಳಲ್ಲಿ, ಕೆಲಸಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಆಸ್ತಿ ವಿಚಾರ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಹೂಡಿಕೆ ಸದ್ಯಕ್ಕೆ ಬೇಡ. ಕೆಲವರಿಗೆ ಜೀವನದಲ್ಲಿ ಹೊಸ ಕೆಲಸ ಅವಕಾಶಗಳಿವೆ. ಸಂಗಾತಿಯೊಡನೆ ವಿರಸ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕುಂಭ ರಾಶಿ: ಅನೇಕ ರೀತಿಯ ಒತ್ತಡಗಳ ನಡುವೆಯೂ ಕೆಲಸದಿಂದ ಯಶಸ್ಸಿ ಹಾಗೂ ನೆಮ್ಮದಿ ಸಿಗಲಿದೆ. ಸಮಾಜದಲ್ಲಿ ಗೌರವ ಆದರಗಳು ದೊರೆಯುವುವು. ನೂತನ ವಾಹನ ಖರೀದಿ ಬಗ್ಗೆ ಮಾತುಕತೆ ನಡೆಯಲಿದೆ. ವೈಯಕ್ತಿಕ ಸಂಗಾತಿಯ ಜೀವನದಲ್ಲಿ ವಿಷಾದ. ರಹಸ್ಯವಾದ ಮಾತುಗಳು ಇಂದು ಪ್ರಚಾರವಾಗುವ ಸಂಭವ. ಆರಾಮವು ನಿಮ್ಮ ಜೀವನದ ಸಂತೋಷಕ್ಕೆ ಒಂದು ದೊಡ್ಡ ಕಾರಣವಾಗಬಹುದು. ಸಂಗಾತಿ ನಿಮ್ಮ ಆಲೋಚನೆಗಳಿಗೆ ಸ್ಪಂದಿಸುವರು, ಆದರೆ ಮದುವೆ ವಿಷಯ ಪ್ರಸ್ತಾಪ ಬಂದಾಗ ದೂರ ಸರಿಯುವರು.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮೀನ ರಾಶಿ: ನೀವು ಯಾವುದೇ ಒಂದು ದೃಢನಿರ್ಧಾರ ಹಿನ್ನಡೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ಸ್ಪರ್ಧಾತ್ಮಕ ದಿನವಾಗಿರುತ್ತದೆ. ಆರಾಧ್ಯ ದೈವವನ್ನು ಸ್ತುತಿಸಿ.ಆರೋಗ್ಯದ ವಿಷಯದಲ್ಲಿ ತೊಂದರೆ ಕಾಡಲಿದೆ .ನೀವು ಸ್ವಲ್ಪ ಆಯಾಸ ಅಥವಾ ಸೋಮಾರಿತನವನ್ನು ಅನುಭವಿಸಬಹುದು. ಪತಿ-ಪತ್ನಿ ವಿರಸದಿಂದ ನರಕಯಾತನೆ. ಮಾತಾಪಿತೃ ಶಸ್ತ್ರಚಿಕಿತ್ಸೆ ಸಂಭವ. ಮಕ್ಕಳ ಆರೋಗ್ಯದ ಮೇಲೆ ಜಾಗೃತಿ ವಹಿಸಿ. ಕೆಲಸಕ್ಕಾಗಿ ಅಲೆದಾಟ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com