ಮೈಸೂರು: ಡ್ರಗ್ಸ್ ವಿಚಾರದಲ್ಲಿ ಆ ಪಕ್ಷ, ಈ ಪಕ್ಷ ಅಂತ ಬರಲ್ಲ. ಯಾವ ಪಕ್ಷದವರು ತಪ್ಪು ಮಾಡಿದ್ರೂ ತಪ್ಪೇ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಗಿಣಿ ಅವರ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ. ಚಿತ್ರ ನಟ, ನಟಿಯರಿಗೆ ಸಮಾಜದಲ್ಲಿ ಜನಪ್ರಿಯತೆ ಇರುತ್ತೆ. ಅವರೇ ಡ್ರಗ್ಸ್ ಸೇವನೆ ಮಾಡಿದ್ರೆ ಸಮಾಜಕ್ಕೆ ಯಾವ ರೀತಿ ಸಂದೇಶ ರವಾನೆ ಆಗುತ್ತೆ. ಆದ್ದರಿಂದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ೆಂದು ತಿಳಿಸಿದರು.
ಪ್ರತಿ ದಿನ ಮುಖ್ಯಮಂತ್ರಿ ಡ್ರಗ್ಸ್ ಪ್ರಕರಣದ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಡ್ರಗ್ಸ್‌ನಿಂದ ಯುವ ಸಮೂಹ ಹಾಳಾಗುತ್ತೆ. ಆದ್ದರಿಂದ ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವ ಇರಲಿ. ಯಾರ ರಕ್ಷಣೆ ಪ್ರಶ್ನೆ ಇಲ್ಲ.
ಡ್ರಗ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಕುಮಾರಸ್ವಾಮಿ ಈಗ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಆಗ ಅವರೇ ಅಧಿಕಾರದಲ್ಲಿದ್ದರು ಇದನ್ನು ಮಟ್ಟ ಹಾಕಬಹುದಾಗಿತ್ತು. ಆಗ ಸುಮ್ಮನೆ ಇದ್ದು ಈಗ ಮಾತನಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.



