ಮುಂಬೈ: ಈ ಬಾರಿ ಐಪಿಎಲ್ ನಿಂದ ಸ್ಪಿನ್ನರ್ ಹರ್ಭಜನ್ ಸಿಂಗ್, ವೈಯುಕ್ತಿಕ ಕಾರಣ ನೀಡಿ ಚೈನ್ನೈ ಸೂಪರ್ ಕಿಂಗ್ ತಂಡದಿಂದ ಹೊರ ಬಂದಿದ್ದಾರೆ.
ತಮ್ಮ ನಿರ್ಧಾರವನ್ನು ಶುಕ್ರವಾರ ತಂಡದ ಮ್ಯಾನೇಜ್‍ಮೆಂಟ್‍ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.ಹರ್ಭಜನ್ ಸಿಂಗ್ 2020ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ನಡೆಯುತ್ತಿರುವ 2ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಸುರೇಶ್ ರೈನಾ ಯುಎಇಗೆ ತೆರಳಿ ವಾಪಸ್ ಆಗಿದ್ದರು.

ಆದರೆ, ಹರ್ಭಜನ್ ಸಿಂಗ್ ತಂಡದೊಂದಿಗೆ ಪ್ರಯಾಣಿಸದೆ ಭಾರತದಲ್ಲೇ ಉಳಿದುಕೊಂಡಿದ್ದರು. ಆ ವೇಳೆಯೇ ಹರ್ಭಜನ್ ಟೂರ್ನಿಯಿಂದ ಹೊರಗುಳಿಯುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿತ್ತು. ಹರ್ಭಜನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.



