ಡಿವಿಜಿ ಸುದ್ದಿ, ದಾವಣಗೆರೆ: ನಾಳೆ (ಸೆ.4) ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಲಿಮಿಟೆಡ್ ಯೋಜನೆಯಡಿ ಕಾಮಗಾರಿಗಳು ಇರುವುದರಿಂದ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದ ಎಫ್18- ದುರ್ಗಾಂಬಿಕಾ ಫೀಡರ್ನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಎಂಬಿ ಕೇರಿ, ಹೋಂಡದ ಸರ್ಕಲ್ ಸುತ್ತಮುತ್ತ, ಕಾಯಿಪೇಟೆ, ಜಾಲಿನಗರ, ಟೀಚರ್ ಕಾಲೊನಿ, ಶಿವಾಜಿ ಸರ್ಕಲ್, ಚಲುವಾದಿ ಕೇರಿ, ಇಡಬ್ಲ್ಯೂಎಸ್ ಕಾಲೊನಿ, ಹಳೇಪೇಟೆ, ಬಾರ್ ಲೈನ್ ರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.



