ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಶನಿವಾರ-ಆಗಸ್ಟ್-22,2020 ರಾಶಿ ಭವಿಷ್ಯ
- ಗಣೇಶ ಚತುರ್ಥಿ ಸೂರ್ಯೋದಯ: 06:11, ಸೂರ್ಯಸ್ತ: 18:33
- ಶಾರ್ವರಿ ನಾಮ ಸಂವತ್ಸರ
ಭಾದ್ರಪದ ಮಾಸ ದಕ್ಷಿಣಾಯಣ - ತಿಥಿ: ಚೌತಿ – 19:56 ವರೆಗೆ
ನಕ್ಷತ್ರ: ಹಸ್ತ – 19:11 ವರೆಗೆ
ಯೋಗ: ಸಾಧ್ಯ – 10:21 ವರೆಗೆ
ಕರಣ: ವಣಿಜ – 09:28 ವರೆಗೆ ವಿಷ್ಟಿ – 19:56 ವರೆಗೆ - ದುರ್ಮುಹೂರ್ತ: 06:11 – 07:00
ದುರ್ಮುಹೂರ್ತ : 07:00 – 07:50 - ರಾಹು ಕಾಲ: 09:00 – 10:30
ಯಮಗಂಡ: 13:30 – 15:00
ಗುಳಿಕ ಕಾಲ: 06:00 – 07:30 - ಅಮೃತಕಾಲ: 13:45 – 15:12
ಅಭಿಜಿತ್ ಮುಹುರ್ತ: 11:57 – 12:47
ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ…..
ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ ಪರೀಕ್ಷಿಸಲು ಸಾಮಾನ್ಯ.
(1) ಗುರು ಗ್ರಹದ ಪ್ರಭಾವ_
ಗುರುಗ್ರಹವು ಉಚ್ಚವಾಗಿದ್ದರೆ ಶುಭ ದೃಷ್ಟಿ ಫಲ ನೀಡುವನು. ಇಂಥವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ದಾಂಪತ್ಯ ಜೀವನ ಅನೇಕ ಕಷ್ಟಕಾರ್ಪಣ್ಯಗಳು ದೂರ ಮಾಡುವನು. ಅದರ ಜೊತೆಗೆ ಸಂತಾನ ಫಲ ನೀಡುತ್ತಾನೆ.
ಗುರುಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದರೆ ಕಷ್ಟ ಕೊಡುತ್ತಾನೆ.ಆದರೆ ವಿಚ್ಛೇದನ ಪ್ರಕ್ರಿಯೆ ಮಾಡುವುದಿಲ್ಲ. ಒಂದು ವೇಳೆ ಗುರುಗ್ರಹವು ಪಾಪಗ್ರಹದ ಪ್ರಭಾವದಲ್ಲಿ ಸಿಲುಕಿದರೆ ದಾಂಪತ್ಯ ಜೀವನ ಅನೇಕ ಪ್ರಕಾರದ ಸಮಸ್ಯೆಗಳನ್ನು ಕೊಡುತ್ತಾನೆ.
(2) ಶುಕ್ರ ಗ್ರಹ
ಶುಕ್ರ ಗ್ರಹದ ಪ್ರಭಾವ ನಿಮ್ಮ ಕುಂಡಲಿಯಲ್ಲಿ ಪರೀಕ್ಷಿಸಬೇಕು. ಶುಕ್ರನು ವಿವಾಹ ಕಾರಣಕರ್ತರು ಎಂದು ಕರೆಯುವುದುಂಟು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕು ಎಂದರೆ ಉತ್ತಮ ಸ್ಥಾನದಲ್ಲಿರಬೇಕು
(3) ಮಂಗಳ ಗ್ರಹ___
ಮದುವೆ ವಿಚಾರದಲ್ಲಿ ಜಾತಕ ಪರೀಕ್ಷಿಸುವಾಗ ಮಂಗಳ ಗ್ರಹದ ಸ್ಥಿತಿ ನೋಡಬೇಕು. ಯಾವ ಮನೆಯಲ್ಲಿದೆ ಅದರ ಮೇಲೆ ಯಾವ ಗ್ರಹದ ದೃಷ್ಟಿ ನೋಡಬೇಕು. ಮಂಗಳನು ಯಾವುದರ ಜೊತೆ ಸಂಯೋಗ ಇದೆ ನೋಡಬೇಕು. ಜಾತಕ ದಲ್ಲಿ ಏನಾದರೂ ತೊಂದರೆ ಅಂದರೆ ಮಾಂಗಲಿಕ( ಮಂಗಳದೋಷ, ಅಂಗಾರಕ ದೋಷ , ಕುಜದೋಷ )ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಬೇಕು. ಇದನ್ನೆಲ್ಲಾ ನೋಡಿ ಮದುವೆಗೆ ಅನುಮತಿ ನೀಡಬೇಕು.
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
_________________________
ರಾಶಿ ಭವಿಷ್ಯ
ಮೇಷ ರಾಶಿ:
ದೊಡ್ಡ ವ್ಯವಹಾರ ಪ್ರಾರಂಭಿಸುವ ಚಿಂತನೆ. ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದ ಉದ್ಯೋಗದ ಭಾಗ್ಯ ಸಿಗಲಿದೆ.
ಕೆಲವು ಬಂಧುಗಳ ಕಿರಿಕಿರಿಯಾಗುತ್ತದೆ ಅವರನ್ನು ದೂರವಿಡಿ.ಪ್ರೀತಿಸಿ ಮದುವೆಯಾದ ಸಮರಸ ಜೀವನ ಕ್ಷೀಣಿಸುತ್ತದೆ.
ಪತಿ ಪತ್ನಿ, ಸಂಗಾತಿ, ಸ್ನೇಹಿತರ ಒಡನಾಟ ಸಂಬಂಧವನ್ನು ವೃದ್ಧಿಯಾಗುವುದು. ಜೀವನದಲ್ಲಿ ಸಂತೋಷ ಅರಳುವುದು. ಮೋಜು ಮಸ್ತಿಯಲ್ಲಿ ತೊಡಗುವಿರಿ.ಕಲಾ ಚಟುವಟಿಕೆಗಳಿಗೆ ಪ್ರಯಾಣ, ಪ್ರೇಮ ವಿಚಾರ ಕುಟುಂಬದಲ್ಲಿ ಪ್ರಸ್ತಾಪ. ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ. ಸೌಂದರ್ಯ ವರ್ಧಕ ವಸ್ತು ಖರೀದಿಗಾಗಿ ಖರ್ಚು. ಹಣಕಾಸು ಖರ್ಚಿನ ಬಗ್ಗೆ ನಿಗಾವಹಿಸಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ವೃಷಭ ರಾಶಿ:
ಹಿತ ಶತ್ರುಗಳ ಬಗ್ಗೆ ಜಾಗೃತಿ ವಹಿಸಿ. ಕುಟುಂಬ ಸದಸ್ಯರೊಡನೆ ತುಂಬಾ ಕಿರಿಕಿರಿಯಾಗುವುದು. ಪ್ರೀತಿ ಪ್ರೇಮ ವಿರಹ. ಹಣಕಾಸಿನ ವ್ಯವಹಾರದಲ್ಲಿ ಮಂದ ಪ್ರಗತಿ.
ನಿಮ್ಮ ಪ್ರಾಮಾಣಿಕ ಪ್ರಯತ್ನ. ಗೆಲುವು ಸಾಧಿಸುವುದು. ಜನರ ಮನಸ್ಸನ್ನು ಗೆಲ್ಲುವ ಆತ್ಮವಿಶ್ವಾಸ ಹೆಚ್ಚಾಗುವುದು. ದುಷ್ಟ ಸ್ನೇಹಿತರಿಂದ ದೂರ ಇರಬೇಕು.ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮಿಥುನ ರಾಶಿ:
ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹೊಸ ಹೊಸ ಅವಕಾಶಗಳು ಸೃಷ್ಟಿ. ಉದ್ಯೋಗದಲ್ಲಿ ಜಾಗ್ರತೆಯಿಂದ ಉದ್ಯೋಗ ನಿರ್ವಹಿಸಿ. ಯಾರ ಜೊತೆ ಮನಸ್ತಾಪ ಬೇಡ. ನಿಮ್ಮ ಆರೋಗ್ಯದಲ್ಲಿ ಜಾಗ್ರತೆ ವಹಿಸಿ. ತಾಳ್ಮೆ ಕಳೆದುಕೊಳ್ಳಬೇಡಿ. ವಾಹನ ವ್ಯಾಪಾರಸ್ಥರಿಗೆ ಅಧಿಕ ಲಾಭ ನಿರೀಕ್ಷಿಸಬಹುದು.
ನಿಮ್ಮ ಜೀವನದಲ್ಲಿ ಸಂತೃಪ್ತಿ. ಗುರಿ ಸಾಧಿಸುವಿರಿ. ಸಂಸಾರದಲ್ಲಿ ಸುಖ ನೆಮ್ಮದಿ ಅರಳುವುದು.ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಕರ್ಕಾಟಕ ರಾಶಿ:
ದೂರದಿಂದ ಬಂದು ಆಗಮನ. ನಿಮಗೆ ಉದರ ದೋಷ ಕಾಡಲಿದೆ. ಜಮೀನ್ ವಿಚಾರಕ್ಕಾಗಿ ಮನಸ್ತಾಪ. ಸದಾ ನೆನಪು ಕಾಡಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಹಳೆಯ ನಿವೇಶನ ಆಧುನಿಕರಣ ಬಗ್ಗೆ ಚಿಂತನೆ. ಕುಟುಂಬ ಸಮೇತ ಬೇರೆ ಊರಿಗೆ ಕೆಲಸಕ್ಕಾಗಿ ಹೋಗುವ ವಿಚಾರದ ಬಗ್ಗೆ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಅಕ್ಕಪಕ್ಕದ ಮನೆಯ ಕುಟುಂಬ ಸದಸ್ಯರಿಂದ ಮನಸ್ತಾಪ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ಬಿನ್ನಾಭಿಪ್ರಾಯ.
ಪತಿ-ಪತ್ನಿ ಸಂಗತಿ ಸ್ನೇಹಿತರ ಒಡನಾಟ ಸಂಬಂಧವನ್ನು ವೃದ್ಧಿಯಾಗುವುದು.ಜೀವನದಲ್ಲಿ ಸಂತೋಷ ಅರಳುವುದು. ಹಣಕಾಸಿನಲ್ಲಿ ಪ್ರಗತಿ ಕಾಣುವಿರಿ. ಹೊಸ ಕಟ್ಟಡಕ್ಕೆ ಕಟ್ಟುವ ವಿಚಾರ ಪ್ರಾರಂಭ.
ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಸಿಂಹರಾಶಿ:
ಪತಿ-ಪತ್ನಿ ಯಲ್ಲಿ ಬಿನ್ನಾಭಿಪ್ರಾಯ ಅಧಿಕವಾಗುವುದು ಹಾಗೂ ಅನುಮಾನ ಸೃಷ್ಟಿ. ಮನಃಶಾಂತಿ ವಿರಳ. ನಂಬಿಕೆ ಇಟ್ಟಿದ್ದ ಸ್ತ್ರೀ ಕಡೆಯಿಂದ ಮನಸ್ತಾಪ. ವ್ಯಾಪಾರಸ್ಥರಿಗೆ ಮಂದಗತಿಯಲ್ಲಿ ಅನುಕೂಲ ಮನೆಯಲ್ಲಿ ಉತ್ತಮ ಕಾರ್ಯಗಳು ಜರುಗುವವು ಮಕ್ಕಳೊಂದಿಗೆ ಸಂತೋಷದ ಕೂಟ ಅನುಭವಿಸುವಿರಿ
ಅಧಿಕಾರಿಗಳಿಂದ ಮತ್ತು ಗಣ್ಯರಿಂದ ಪ್ರಶಂಸೆ ಸಿಗಲಿದೆ. ಪ್ರೇಮ ಬರ ಕಣದಲ್ಲಿ ಬಿನ್ನಾಭಿಪ್ರಾಯ
ಸಮಸ್ಯೆಗಳ ಸುರಿಮಳೆ ಬರುವುದು, ಆದರೆ ನಿಮ್ಮ ಆತ್ಮಸ್ಥೈರ್ಯದಿಂದ ಎದುರಿಸುವಿರಿ. ಹೊಸ ಪ್ರಯತ್ನ ಪ್ರಾರಂಭ ಮಾಡುವಿರಿ. ಹಿರಿಯರ ಸಲಹೆ ಪಡೆದುಕೊಂಡು ಹೊಸ ಉದ್ಯಮ ಪ್ರಾರಂಭ ಮಾಡುವ ಯೋಜನೆ.ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಕನ್ಯಾ ರಾಶಿ:
ಮನೆಯಲ್ಲಿ ಎಚ್ಚರಿಕೆ ಬೇಕು, ತಂದೆ-ತಾಯಿಯರಿಗೆ ಗೌರವ ಕೊಡಿ.ಪತಿ-ಪತ್ನಿಯರಲ್ಲಿ ಕಲಹದ ವಾತಾವರಣ, ಮಾತಿನಲ್ಲಿ ಹಿಡಿತವಿರಲಿ,
ಸಾಲಬೇಡ, ಮಾತಿನ ಮೇಲೆ ಪರಿಣಾಮ ಬೀರಲಿದೆ, ಸಂಗಾತಿಯ ಸಹಕಾರ ಇರಲಿದೆ,
ಉದ್ಯೋಗ ಸ್ಥಳದಲ್ಲಿ ಕಂಟಕ, ಸಹೋದರರ ಸಹಕಾರ. ಅತಿಯಾದ ಶ್ರಮದಿಂದ ಆರೋಗ್ಯದಲ್ಲಿ ಏರುಪೇರು. ಮಕ್ಕಳ ವಿಧವ ವಿವಾಹದ ಚಿಂತನೆ. ಮಕ್ಕಳ ಸಂತಾನದ ಚಿಂತನೆ. ಹಣಕಾಸಿನಲ್ಲಿ ತೀವ್ರ ಸಂಕಟ.ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.93534 88403
ತುಲಾ ರಾಶಿ :
ಸಾಲಬಾಧೆಯಿಂದ ಕಿರಿಕಿರಿ. ಸಹೋದರದಿಂದ ಮನಸ್ತಾಪ. ಮಾತಾಪಿತೃ ಆರೋಗ್ಯದಲ್ಲಿ ಸಮಸ್ಯೆ. ನವದಂಪತಿಗಳಿಗೆ ಸಂತಾನ ವಿಷಯದಲ್ಲಿ ಮಾನಸಿಕ ನೋವು. ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ನಿಧಾನಗತಿ ಚೇತರಿಕೆ. ಲೇವಾದೇವಿ ವ್ಯಾಪಾರಸ್ಥರಿಗೆ ಅಧಿಕ ಲಾಭ. ಸ್ತ್ರೀಯರ ಕಾರಣಕ್ಕಾಗಿ ಅವಮಾನ ಸಂಭವ. ಮನೆಯ ವಾಸ್ತು ದೋಷದಿಂದ ಅಶಾಂತಿ, ಅನಾರೋಗ್ಯ,ಆರ್ಥಿಕದಲ್ಲಿ ನಷ್ಟ.
ಸ್ನೇಹಿತರ ಹಿರಿಯರ ಪ್ರೇರಣೆಯಿಂದ ಕೆಲಸ ಸಿಗುವುದು. ನೀವು ಆಸಕ್ತಿಯಲ್ಲಿ ತೃಪ್ತಿ ಸಿಗುತ್ತದೆ. ಕುಟುಂಬ ಕಲಹಗಳು ಎದುರಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆಸಕ್ತಿಯಿಂದ ಕೆಲಸ ನಿರ್ವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.ಮೇಲಧಿಕಾರಿಗಳಅವಕೃಪೆಗೆತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ವೃಶ್ಚಿಕ ರಾಶಿ:
ಆರೋಗ್ಯದ ಸಮಸ್ಯೆ ಮುಂದುವರೆದು ಮನಸ್ಸು ಜಿಗುಪ್ಸೆ ಆಗುತ್ತದೆ. ಮರು ವಿವಾಹ ಕಾರ್ಯ ಚಾಲನೆ. ಹಳಸಿಹೋದ ಸಂಬಂಧ ಮರುಸೃಷ್ಟಿ. ಶತ್ರುಗಳ ಬಗ್ಗೆ ಜಾಗೃತಿ ವಹಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ ಅತೃಪ್ತಿ. ಸಂತಾನದ ತೊಂದರೆ ಮುಂದುವರೆಯುತ್ತದೆ. ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು ಎದುರಿಸುವ ಸಂಭವ. ಪ್ರೇಮಿಗಳಿಬ್ಬರಲ್ಲಿ ವ್ಯಾಮೋಹ ಅಧಿಕವಾಗುತ್ತದೆ.
ನಿಮ್ಮನ್ನು ಕೊಂಡಾಡಿ ಅಟ್ಟಕ್ಕೆ ಕೂಡಿಸಿ ನೆಲಕ್ಕೆ ಬೀಳಿಸುವರಿಂದ ಎಚ್ಚರವಹಿಸಿ. ತಾವು ತೆಗೆದುಕೊಂಡಿರುವ ನಿರ್ಧಾರಗಳು ಸಮಸ್ಯೆಗಳನ್ನು ಎದುರಿಸಬಹುದಾದ ಸಂಭವ. ಅಪಾಯಗಳು ಎದುರಿಸಲು ತಯಾರಿ ಮಾಡಿಕೊಳ್ಳಿ.
ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಧನಸು ರಾಶಿ :
ಸಹೋದರಿ ಯಿಂದ ಧನಸಹಾಯ. ಸ್ನೇಹ ವರ್ಗದಿಂದ ಉದ್ಯೋಗದಲ್ಲಿ ಅನುಕೂಲ. ಕಷ್ಟಕರ ಕೆಲಸದಲ್ಲಿ ಯಶಸ್ಸು. ಮನೋಧೈರ್ಯ ಅಧಿಕವಾಗುತ್ತದೆ. ದೀರ್ಘಕಾಲೀನ ವ್ಯಾಧಿ ನಿವಾರಣೆ .ವಿವಿಧ ಮೂಲಗಳಿಂದ ಧನಾಗಮನ. ಮಕ್ಕಳ ವಿವಾಹ ಕಾರ್ಯದ ಬಗ್ಗೆ ಚಿಂತನೆ. ಪ್ರೇಮ ನಿವೇದನೆಗೆ ಶುಭಕಾಲ. ಉದ್ಯೋಗಕ್ಕಾಗಿ ಸಂದರ್ಶನ.
ಅನಾವಶ್ಯಕ ಮಾತಿನಿಂದ ಸಮಸ್ಯೆಗಳು ಸಂಭವ. ನಿಮ್ಮ ಸಮಯ ಕಠಿಣವಾಗಿದೆ, ಎದುರಿಸುವ ತಯಾರಿ ಮಾಡಿಕೊಳ್ಳಿ. ಕುಟುಂಬದಲ್ಲಿ ಸಂಘರ್ಷ ಉಂಟಾಗಬಹುದು. ಸಮಾಧಾನದಿಂದ ಬಗೆಹರಿಸಿಕೊಳ್ಳಿ.
ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮಕರ ರಾಶಿ:
ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ. ಸಾಲಭಾದೆಯಿಂದ ತುಂಬಾ ಬೇಸರ. ಎದೆ ನೋವಿನಿಂದ ನರಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ. ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸು. ವಿಚ್ಛೇದನದ ಮಗಳ ಮರುಮದುವೆ ಚಿಂತನೆ ಯಶಸ್ಸು. ತೀವ್ರ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಪ್ರಸಂಗ ಬರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೊಂದಾಣಿಕೆ ಸೂಕ್ತ. ಜೀವನದಲ್ಲಿ ಹಲವು ಬದಲಾವಣೆಗಳು ಆಗುವುದು. ಹಠ ಜಿದ್ದಿ ಬೇಡವೇ ಬೇಡ.
ಯಾವುದೇ ಕೆಲಸಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ದೈಹಿಕವಾಗಿ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ವಿಮರ್ಶಿಸಿ ಮುಂದುವರಿಯುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆತಂಕವಿದೆ. ಇಂದು ನೀವು ರಿಯಲ್ ಎಸ್ಟೇಟ್ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ತಂದೆಯ ಆಶೀರ್ವಾದದಿಂದ ಸರ್ಕಾರವು ನಿಮ್ಮನ್ನು ಗೌರವಿಸುವ ಸಾಧ್ಯತೆಯಿದೆ.
ಸೋಮಶೇಖರ್B.Sc
Mob.93534 88403
ಕುಂಭ ರಾಶಿ:
ಅಶುಭಫಲ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಾಡಲಿದೆ. ಕಾರ್ಯಗಳಲ್ಲಿ ವಿಘ್ನ ಕಾಡಲಿದೆ. ಚೋರ ಭಯ. ಉದ್ಯೋಗದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆ ಕಾಡಲಿದೆ. ಪ್ರೇಮಿಗಳ ವಿವಾಹ ಹಿರಿಯರ ವಿರೋಧ.
ಅದೃಷ್ಟ ಬದಲಾವಣೆ ಸಂಭವ. ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ, ಹಣಕಾಸಿನ ಪ್ರಗತಿ ಕಾಣುವಿರಿ.
ಸಂಸಾರದಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಸೂಕ್ತ ಸಲಹೆಗಳು ಕಾರ್ಯಾನುಕೂಲಕ್ಕೆ ಉಪಯುಕ್ತವಾಗಲಿವೆ. ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫಲಿತಾಂಶ ಹಾಗೂ ಅವಕಾಶಗಳು ಬರಲಿವೆ. ದೇವರ ಮೇಲೆ ನಂಬಿಕೆ ಇಡಿ. ನೀವು ಏನೇ ಮಾಡಿದರೂ ಅದನ್ನು ಕೃಷ್ಣನಿಗೆ ಅರ್ಪಿಸಿ. ಅವನ ಅನುಗ್ರಹದಿಂದ, ಪರಿಸ್ಥಿತಿಗಳು ನಿಮಗೆ ಒಳ್ಳೆಯದನ್ನು ತರುತ್ತವೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೀನ ರಾಶಿ:
ಸ್ತ್ರೀಯರಿಗೆ ಸಂತಾನಭಾಗ್ಯ ಲಭಿಸಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಉದ್ಯೋಗಿಗಳು ಉದ್ಯೋಗದ ಬಗ್ಗೆ ಗಮನವಿರಲಿ. ಆರೋಗ್ಯದ ಸಮಸ್ಯೆ ಕಾಡಲಿದೆ ಗಮನವಿರಲಿ ಹಾಗೂ ಎಚ್ಚರವಹಿಸಿ. ಹಣಕಾಸಿನ ಪ್ರಗತಿ ಮಂದಗತಿ. ಹೊಸ ಉದ್ಯಮ ಪ್ರಾರಂಭ ವಿಳಂಬ. ಪ್ರೇಮಿಗಳ ಮನಸ್ತಾಪ ಕಾಡಲಿದೆ.
ಗುರು ಈ ರಾಶಿಗೆ ಅಧಿಪತಿಯಾಗಿರುತ್ತಾನೆ. ಸ್ನೇಹಿತರೊಡನೆ, ಕುಟುಂಬ ಜೊತೆ, ಸಮಾಜದಲ್ಲಿ ವಿರೋಧಗಳು ಸೃಷ್ಟಿಯಾಗಬಹುದು. ಜಾಣ್ಮೆಯಿಂದ ಸಮಸ್ಯೆಗಳಿಂದ ಪಾರಾಗಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353 488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com