ಡಿವಿಜಿ ಸುದ್ದಿ, ದಾವಣಗೆರೆ: ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆಗಳಿಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನಿಸಿದೆ.
ತಳಮಟ್ಟದಲ್ಲಿ ಪರಿಣಾಮಕಾರಿಯಾದ ಕ್ರೀಡಾ ತರಬೇತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜೂಡೋ, ರೋವಿಂಗ್, ಶೂಟಿಂಗ್,ಸ್ವಿಮ್ಮಿಂಗ್,ಟೇಬಲ್ ಟೆನ್ನೀಸ್, ವ್ಹೇಟ್ಲಿಫ್ಟಿಂಗ್, ಕುಸ್ತಿ ಈ ಎಲ್ಲಾ ಕ್ರೀಡೆಗಳನ್ನು ಗುರುತಿಸಲಾಗಿದೆ.
ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತ ಕ್ರೀಡಾಪಟು ಹಾಗೂ ಸಂಸ್ಥೆಗಳು ತರಬೇತಿ ನೀಡುತ್ತಿದ್ದಲ್ಲಿ, ಅಂತಹ ಕೇಂದ್ರಗಳನ್ನು ಖೇಲೋ ಇಂಡಿಯಾ ಕೇಂದ್ರವಾಗಿ ಗುರುತಿಸಲಾಗುವುದು.
ಆಯ್ಕೆಯಾದಂತಹ ಕೇಂದ್ರಗಳಿಗೆ ಕೇಂದ್ರ ಸರ್ಕಾರದಿಂದ ತರಬೇತುದಾರರ ಗೌರವಧನ, ಸಹಾಯಕ ಸಿಬ್ಬಂದಿ, ಕ್ರೀಡಾ ಉಪಕರಣಗಳು, ಕ್ರೀಡಾ ಕಿಟ್, ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆಗೆ ತಗಲುವ ವೆಚ್ಚವನ್ನು ಗರಿಷ್ಟ ವಾರ್ಷಿಕ ರೂ.5.00 ಲಕ್ಷಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



