ಡಿವಿಜಿ ಸುದ್ದಿ, ಚನ್ನಗಿರಿ: ಬೆಳೆ ಸಮೀಕ್ಷೆ ರೈತರಿಗೆ ನೀಡಿದ ಸ್ವಾತಂತ್ರ್ಯವಾಗಿದ್ದು, 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೈತರಿಗೆ ಕೊಡುಗೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವೇ ನಂಬರ್ ಹಿಸ್ಸಾವಾರು ಸಮೀಕ್ಷೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ನನ್ನ ಬೆಳೆ, ನನ್ನ ಹಕ್ಕು, ನನ್ನಬೆಳೆ ನನ್ನಸರ್ವೇ, ನನ್ನಬೆಳೆ ನನ್ನ ಸಮೀಕ್ಷೆ ಲಭ್ಯವಿದ್ದು, ರೈತರೇ ನೇರವಾಗಿ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
50 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಹಣ ನೊಂದಣಿಯಾಗಿದೆ. ಮುಂಗಾರು, ಹಿಂಗಾರು ಬೆಳೆ ಪ್ರತ್ಯೇಕವಾಗಿ ಸಮೀಕ್ಷೆ ಮಾಡಲಾಗುವುದು. ಜಿಲ್ಲೆಗೆ 2,700 ಟನ್ ಯೂರಿಯಾ ಬರುವುದು ಬಾಕಿ ಇದೆ ಈಗಾಗಲೇ 67 ಸಾವಿರ ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಆಗಿದೆ ಕೆಲವೇ ದಿನಗಳಲ್ಲಿ ಬಾಕಿ ರಸಗೊಬ್ಬರ ಸರಬರಾಜು ಆಗಲಿದೆ ಎಂದರು.



