ಡಿವಿಜಿ ಸುದ್ದಿ, ದಾವಣಗೆರೆ: ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕೆಂದು ಶ್ರೀರಾಮ ಸೇನಾ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ 125 ವರ್ಷಗಳ ಪರಂಪರೆಗೆ ಧಕ್ಕೆ ತರುವುದು ಸರಿಯಲ್ಲ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ದೇಶವನ್ನು ಒಗ್ಗೂಡಿಸಲು ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಕರೆ ನೀಡಿದರು.ಇಂತಹ ಸಾರ್ವಜನಿಕ ಉತ್ಸವವನ್ನು ರಾಜ್ಯ ಸರ್ಕಾರ ಕೋವಿಡ್-19 ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಖಂಡನೀಯ.
ಜನರು ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ. ಹೀಗಾಗಿ ಕೋವಿಡ್ ನೆಪಕ್ಕೆ 125 ವರ್ಷಗಳ ಪರಂಪರೆಗೆ ಘಾಸಿಗೊಳಿಸುವುದು ಸರಿಯಲ್ಲ. ದೇಶದ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕ ಗಣಪತಿಗೆ ವಿಘ್ನವಿರಲಿಲ್ಲ. ಬಾರ್, ಜಿಮ್ ಗಳಿಗೆ ಅನುಮತಿ ನೀಡಲಾಗಿದೆ. ಆದರೆ ಗಣೇಶೋತ್ಸವಕ್ಕೆ ಅನುಮತಿ ನೀಡದಿರುವುದು ಸರಿಯಲ್ಲ ಎಂದರು.
ಒಂದು ವೇಳೆ ಅನುಮತಿ ನೀಡದಿದ್ದರೂ ಸಾಂಕೇತಿಕವಾಗಿಯಾದರೂ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುವುದು. ನಮ್ಮನ್ನು ಬಂಧಿಸಿದರೂ ಜೈಲಿನಲ್ಲಿಯೇ ಗಣೇಶನ ಪೂಜೆ ಮಾಡಲಾಗುವುದು ಎಂದರು.
ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಘಟನೆಗೆ ಎಸ್ ಡಿಪಿ ಐ ಹಾಗೂ ಪಿಎಫ್ ಐನಂತಹ ಭಯೋತ್ಪಾದಕ ಸಂಘಟನೆಗಳೇ ಕಾರಣ ಈ ಬಗ್ಗೆ ದಾಖಲೆಗಳು ಸಮಗ್ರ ಮಾಹಿತಿ ದೊರೆತರೂ ಸಹ ಸರ್ಕಾರ ಈ ಸಂಘಟನೆಗಳ ಮೇಲೆ ಕ್ರಮ ಕೈಗೊಂಡು ನಿಷೇಧ ಮಾಡುತ್ತಿಲ್ಲ. ಈ ಎರಡೂ ಸಂಘಟನೆಗಳು 11 ಗಲಭೆಗಳಲ್ಲಿ ಭಾಗಿಯಾಗಿವೆ ಈ ಬಗ್ಗೆ ಸಂಪೂರ್ಣ ದಾಖಲೆಗಳು ಸಾಕ್ಷಿಗಳಿವೆ ಎಲ್ಲವನ್ನೂ ಪರಿಗಣಿಸಿ ಎಸ್ ಡಿಪಿ ಐ ಹಾಗೂ ಪಿಎಫ್ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿಸರ್ಕಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿವಿನೋದ್ ರಾಜ್ ಡಿ.ಬಿ,ಶ್ರೀಧರ್,ಸಾಗರ್ ಇದ್ದರು.



