ಡಿವಿಜಿ ಸುದ್ದಿ, ಜಗಳೂರು: 20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಿಸಿಕೊಡಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಎಸ್.ವಿ ರಾಮಚಂದ್ರ ಹೇಳಿದರು .
ಪಟ್ಟಣದ ವಿದ್ಯಾನಗರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಬರದನಾಡು ಜಗಳೂರನ್ನು ಹಸಿರನ್ನಾಗಿ ಮಾಡುವ ಸಂಕಲ್ಪ ಮಾಡಿದರು. ಸರ್ಕಾರಗಳ ಮೇಲೆ ಒತ್ತಡ ತಂದು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು.
ಪೈಪ್‌ಲೈನ್ ಕಾಮಗಾರಿ ಆರಂಭವಾಗಿದ್ದು, ಮುಂದಿನ ವರ್ಷ ಈ ವೇಳೆ ಕೆರೆಗಳಲ್ಲಿ ನೀರು ಕಾಣಬಹುದು. ಅಪ್ಪರ್‌ಭದ್ರಾ ಯೋಜನೆಯಲ್ಲಿ ಕೂಡ ಬಿ.ಎಸ್ ಯಡಿಯೂರಪ್ಪ ಅವರು 2.4 ಟಿಎಂಸಿ ನೀರಿಗೆ ಮಂಜೂರಾತಿ ಮಾಡಿಸಿ ನೀರು ಹಂಚಿಕೆ ಮಾಡಿಸಲಾಗಿತ್ತು. ನಂತರ ಬಂದ ಸರ್ಕಾರ ಯಾವ ಕೆಲಸ ಮಾಡಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಸರ್ವೇ ಕೆಲಸ ಮುಗಿಸಲಾಗಿದ್ದು, ಇಸ್ರೇಲ್ ಮಾದರಿಯಲ್ಲಿ ಪೈಪ್‌ಲೈನ್ ಮೂಲಕ ನೀರು ತರುವ ಪ್ರಯತ್ನ ಮಾಡಲಾಗಿದೆ. ಸುಮಾರು 1200 ಕೋಟಿ ವೆಚ್ಚದಲ್ಲಿ 40 ಸಾವಿರ ಎಕರೆ ಪ್ರದೇಶವನ್ನು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್ , ತಾ.ಪಂ ಸದಸ್ಯ ಸಿದ್ದೇಶ್, ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಕೊಟ್ರೇಶ್, ಬಿ.ಪಿ ಸುಭಾನ್, ಸಂಘದ ಅಧ್ಯಕ್ಷ ಜಿ.ಎಸ್ ಚಿದಾನಂದಪ್ಪ, ಗೌರವ ಅಧ್ಯಕ್ಷ ಡಿ.ಶ್ರೀನಿವಾಸ್, ಅಜಯ್ ಸಿಂಹ, ಜಿ.ಪಂ ಸದಸ್ಯರಾದ ಶಾಂತಕುಮಾರಿ ಶಶಿಧರ್, ಉಮಾವೆಂಟಕೇಶ್, ಸವಿತಾ ಕಲ್ಲೇಶ್, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಎಚ್.ಸಿ ಮಹೇಶ್, ಮಾಜಿ ಅಧ್ಯಕ್ಷ ಡಿ.ವಿ ನಾಗಪ್ಪ, ತಾ.ಪಂ ಇಒ ಮಲ್ಲನಾಯ್ಕ, ತಾ.ಪಂ ಸದಸ್ಯ ಟಿ. ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



