ಡಿವಿಜಿ ಸುದ್ದಿ, ಹೊನ್ನಾಳಿ: ತಾಲ್ಲೂಕು ಪಂಚಾಯಿತಿ ಸದಸ್ಯೆ ದಿಡಗೂರು ಗ್ರಾಮದ ಸುಲೋಚನಮ್ಮ ಫಾಲಾಕ್ಷಪ್ಪ ಅವರು (62) ಕೊರೊನಾದಿಂದ ಮೃತಪಟ್ಟಿದ್ದಾರೆ.
ನಾಲ್ಕು ದಿನದ ಹಿಂದೆ ಹೊನ್ನಾಳಿಯಲ್ಲಿ ಟೆಸ್ಟ್ ಮಾಡಿಸಿದಾಗ ಕೊರೊನಾ ನೆಗೆಟಿವ್ ಬಂದಿತ್ತು. ಸುಲೋಚನಮ್ಮ ಅವರಿಗೆ ಅಸ್ತಮಾ ಇದ್ದ ಕಾರಣ ಕುಟುಂಬದವರು ದಾವಣಗೆರೆಯಲ್ಲಿ ಮತ್ತೊಮ್ಮ ಪರೀಕ್ಷೆ ಮಾಡಿದಾಗ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ವೆಂಟಿಲೇಟರ್ ಸಿಗದ ಕಾರಣ ಬಾಪುಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಪತಿ ಬಿಜೆಪಿ ಮುಖಂಡ ದಿಡಗೂರು ಫಾಲಾಕ್ಷಪ್ಪ, ಇಬ್ಬರು ಪುತ್ರರು, ನಾಲ್ಕು ಪುತ್ರಿಯರು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಸರ್ಕಾರದ ಮಾರ್ಗ ಸೂಚಿ ಪ್ರಕಾರ ನೆರವೇರಿಸಲಾಯಿತು.



