ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ ಜಿಲ್ಲೆ ರೈತರ ಜೀವ ಜಲ ಭದ್ರಾ ಡ್ಯಾಂ ಭರ್ತಿಗೆ ಇನ್ನು 10 ಅಡಿ ಮಾತ್ರ ಬಾಕಿ ಇದೆ. ಇಂದು ಬೆಳಗ್ಗೆ ಹೊತ್ತಿಗಿನ ನೀರಿನ ಮಟ್ಟ 176.50 ಅಡಿಯಷ್ಟಿದೆ.
ಭದ್ರಾ ಡ್ಯಾಂ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಈಗಾಗಲೇ 176 .50 ಅಡಿಯಷ್ಟು ತುಂಬಿದೆ. ಡ್ಯಾಂ ಭರ್ತಿಗೆ 10 ಅಡಿಯಷ್ಟು ನೀರು ಅಗತ್ಯವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂಗೆ 29,142 ಕ್ಯೂಸೆಕ್ ಒಳಹರಿವಿದ್ದು, 3006 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂ ವ್ಯಾಪ್ತಿಯಲ್ಲಿ 3.20 ಮಿಲಿ ಮೀಟರ್ ಮಳೆಯಾಗಿದೆ.ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 180.10 ಅಡಿಯಿತ್ತು. ಪ್ರಸ್ತುತ ಡ್ಯಾಂನಲ್ಲಿ 59.993 ಟಿಎಂಸಿ ನೀರು ಸಂಗ್ರಹವಾಗಿದೆ.



