ಡಿವಿಜಿ ಸುದ್ದಿ, ತುಮಕೂರು: ಡಿಜೆ ಹಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕೊಟ್ಟಿದೆ ಎಂದು ಹೇಳುವ ರಾಮಲಿಂಗಾ ರೆಡ್ಡಿ ಮೀರ್ ಸಾದಿಕ್ ರೆಡ್ಡಿ. ಕಾಂಗ್ರೆಸ್ಸಿನವರು ತಮ್ಮ ವೋಟ್ ಬ್ಯಾಂಕ್ ಗಾಗಿ ಗಲಭೆಕೋರರ ಬೆಂಬಲಕ್ಕೆ ನಿಂತು ಓಲೈಕೆ ರಾಜಕಾರಣ ಮಾಡುತಿದ್ದಾರೆ ಎಂದು ದೂರಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಗಲಭೆಕೋರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಿದಾಗ ಮಾತ್ರ ಬುದ್ಧಿ ಬರುತ್ತದೆ. ಕಳೆದ 70 ವರ್ಷದಿಂದ ಈ ಸಮುದಾಯವನ್ನು ಪ್ರೀತಿಯಿಂದ ನೋಡಿಕೊಂಡು ಬರುತ್ತಿದ್ದೇವೆ. ಆದರೂ ಅವರು ತಮ್ಮ ಚಾಳಿ ಬಿಟ್ಟಿಲ್ಲ. ನಮ್ಮ ಪ್ರೀತಿಗೆ ಬೆಲೆನೆ ಇಲ್ಲವೇ ಎಂದು ಸೊಗಡು ಶಿವಣ್ಣ ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮಾನ ಮರ್ಯಾದೆ ಮೀರಿ ಮಾತನಾಡುತ್ತಿದ್ದಾರೆ. ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರು ಅನ್ನುವ ರೀತಿಯಲ್ಲಿ ಹೇಳಿಕೆ ನೀಡುತಿದ್ದಾರೆ. ಎಸ್ಡಿಪಿಐ, ಪಿಎಫ್ಐ ಸಂಘಟನೆಗಳು ಇವರೇ ಬೆಳೆಸಿದ ಪಾಪದ ಕೂಸುಗಳು. ಅವರ ಮೇಲಿದ್ದ ಕೇಸ್ಗಳನ್ನು ಸಿದ್ದರಾಮಯ್ಯನವರೇ ಹಿಂದೆ ಪಡಿದಿದ್ದಾರೆ. ಸಿದ್ದರಾನಯ್ಯರು ಈ ಮನಸ್ಥಿತಿಯಿಂದ ಹೊರಕ್ಕೆ ಬರಬೇಕು ಎಂದರು.
ಮುಸ್ಲಿಂ ಸಮುದಾಯದ ಯುವಕರು ಆಂಜನೇಯ ಸ್ವಾಮಿ ದೇವಸ್ಥಾನ ರಕ್ಷಣೆ ಮಾಡುವ ನಾಟಕ ಆಡಿದ್ದಾರೆ. ಬೆಕ್ಕು ಇಲ್ಲಿ ಆಟ ಆಡಿ ನಾಟಕ ಮಾಡಿದ್ದಾರೆ. ಅದರಲ್ಲಿ ಏನೂ ಔದಾರ್ಯತೆ ಇಲ್ಲ. ಆಂಜನೇಯಸ್ವಾಮಿ ಸ್ವಾಮಿ ದೇವಸ್ಥಾನ ಅವರು ಮುಟ್ಟಿ ನೋಡಬೇಕಿತ್ತು. ನಾವೇನು ಸುಮ್ಮನಿರುತ್ತಿರಲಿಲ್ಲ. ಮುಂದೆ ನಾವೂ ಕೂಡ ಹುಲಿ ಆಟ ಆಡಬೇಕಾಗುತ್ತದೆ ಎಂದರು.



