ನವದೆಹಲಿ: ದೇಶದಾದ್ಯಂತ ಇಂದು 52,509 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 857 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಇದುವರೆಗೆ 19,08,255 ಮಂದಿಗೆ ಸೋಂಕು ತಗುಲಿದ್ದು, 39,795 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 12,82,216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,86,244 ಸಕ್ರಿಯ ಪ್ರಕರಣಗಳು ದೇಶದಲ್ಲಿವೆ.
ಮಹಾರಾಷ್ಟ್ರದಲ್ಲಿ 4,50,196 ಜನರಿಗೆ ಸೋಂಕು ತಗುಲಿದೆ. 1,47,324 ಸಕ್ರಿಯ ಪ್ರಕರಣಗಳೊಂದಿಗೆ ಇದುವರೆಗೆ 2,87,030 ಗುಣಮುಖರಾಗಿದ್ದಾರೆ. ಈವರೆಗೂ ಒಟ್ಟು15,842 ಮಂದಿ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ 2,63,222 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 2,02,283 ಮಂದಿ ಗುಣಮುಖರಾಗಿದ್ದಾರೆ. 56,698 ಸಕ್ರಿಯ ಪ್ರಕರಣಗಳಿದ್ದು, 4,241 ಮಂದಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿ 1,66,586 ಮಂದಿಗೆ ಕೊರೊನಾ ಪಾಸಿಟಿವ್ ತಗುಲಿದೆ. 76,377 ಸಕ್ರಿಯ ಪ್ರಕರಣಗಳೊಂದಿಗೆ 88,672 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ 1,537 ಸಾವನ್ನಪ್ಪಿದ್ದಾರೆ. ಇನ್ನು ರಾಜಧಾನಿ ದೆಹಲಿಯಲ್ಲಿ 1,38,482 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದುವರೆಗೆ 4,021 ಮಂದಿ ಕೊನೆಯುಸಿರೆಳೆದಿದ್ದಾರೆ. 1,24,254 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ 97,362 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, 1,778 ಜನರು ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ 2,508, ಪಶ್ಚಿಮ ಬಂಗಾಳದಲ್ಲಿ 1,731, ಉತ್ತರ ಪ್ರದೇಶ 1,778, ಮಧ್ಯ ಪ್ರದೇಶ 900 ಮತ್ತು ರಾಜಸ್ಥಾನದಲ್ಲಿ 715 ಮಂದಿ ಮೃತಪಟ್ಟಿದ್ದಾರೆ.



