ನವದೆಹಲಿ: ಕೋವಿಡ್-19 ಕಾರಣದಿಂದ ಎಬಿಡಿ ವಿಲಿಯರ್ಸ್ ಸೇರಿದಂತೆ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.
ಕೊರೊನಾ ವೈರಸ್ ಲಾಕ್ಡೌನ್ನಿಂದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ , ಈ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾದ ಹಲವು ಆಟಗಾರರು ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ. ಅದರಲ್ಲೂ ಬೆಂಗಳೂರು ತಂಡಕ್ಕೆ ಹೆಚ್ಚು ನಷ್ಟವಾಗಲಿದೆ.

ದಕ್ಷಿಣ ಆಫ್ರಿಕಾದಲ್ಲಿ ವ್ಯಾಹೀಗಾಗಿ ಅಲ್ಲಿನ ಸರ್ಕಾರ ಸೆಪ್ಟಂಬರ್ ಅಂತ್ಯದವರೆಗೂ ಇಡೀ ದೇಶವನ್ನೇ ಲಾಕ್ಡೌನ್ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಿದೆ. ಈ ಕಾರಣದಿಂದ ಸೆಪ್ಟಂಬರ್ ಮಧ್ಯಭಾಗದಿಂದ ಆರಂಭವಾಗುವ ಐಎಪಿಲ್ ಆರಂಭದ ಪಂದ್ಯಗಳಿಗೆ ಸೌತ್ ಆಫ್ರಿಕಾದ ಆಟಗಾರರು ಅಲಭ್ಯರಾಗಲಿದ್ದಾರೆ.
ಐಪಿಎಲ್ ಪ್ರಾಂಚೈಸಿಗಳು ವಿಶೇಷ ವಿಮಾನ ಮೂಲಕ ಆಟಗಾರರನ್ನು ಕರೆಸಿಕೊಳ್ಳುವುದಾಗಿ ಹೇಳಿಕೊಂಡಿವಈ ಬಗ್ಗೆ ಯಾವುದೇ ಅನುಮತಿಯನ್ನು ಈವರೆಗೆ ನೀಡಿಲ್ಲ. ಒಂದು ವೇಳೆ ಅಲ್ಲಿನ ಸರ್ಕಾರ ಅನುಮತಿ ನೀಡದಿದ್ದರೆ ಆರ್ಸಿಬಿ ತಂಡಕ್ಕೆ ಹೆಚ್ಚಿನ ನಷ್ಟವಾಗಲಿದೆ. ಆರ್ಸಿಬಿ ಸೌತ್ ಆಫ್ರಿಕಾದ ಮೂರು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ. ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್, ವೇಗಿ ಡೇಲ್ ಸ್ಟೇನ್ ಹಾಗೂ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ.
ಆಫ್ರಿಕಾದ ಆಟಗಾರರಾದ ಎಬಿ ಡಿವಿಲಿಯರ್ಸ್ , ಕ್ವಿಂಟನ್ ಡಿ ಕಾಕ್ , ಡೇಲ್ ಸ್ಟೇನ್ , ಕ್ರಿಸ್ ಮೋರಿಸ್ , ಕಗಿಸೊ ರಬಾಡಾ , ಲುಂಗಿ ಎನ್ಜಿಡಿ , ಫಾಫ್ ಡು ಪ್ಲೆಸಿಸ್ , ಇಮ್ರಾನ್ ತಾಹಿರ್ , ಡೇವಿಡ್ ಮಿಲ್ಲರ್ , ಹಾರ್ಡಸ್ ವಿಲ್ಜೋಯೆನ್ ಈ ಎಲ್ಲ ಆಟಗಾರರು ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.




