ಡಿವಿಜಿಸುದ್ದಿ.ಕಾಂ, ದಾವಣಗೆರೆ: ವಿಶ್ವ ಹಿಂದೂ ಪರಿಷತ್ , ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಸೆ. 29 ರಿಂದ ಅ.8ರವರೆಗೆ ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ದೇವರಮನೆ ಶಿವಕುಮಾರ್, ಸೆ. 29 ರಂದು ಬೆಳಗ್ಗೆ 10 ಗಂಟೆಗೆ ನಿಟ್ಟವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಿಂದ ಪೂರ್ಣಕುಂಭ ಮೆರವಣಿಗೆ ನಡೆಯಲಿದ್ದು, ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಓಂಕಾರ ಶಿವಾಚಾರ್ಯ ಸ್ವಾಮೀಜಿ ದೇವಿಯ ವಿಗ್ರಹ ಘಟ ಸ್ಥಾಪನೆ ಮಾಡಲಿದ್ದಾರೆ ಎಂದರು.
ಅ.3 ರಂದು ಬೆಳಗ್ಗೆ 10.30 ರಿಂದ ನಗರದ ಹೈಸ್ಕೂಲ್ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಆಟೋ ರ್ಯಾಲಿ ನಡೆಯಲಿದೆ. ಅ.5 ಬೆಳಗ್ಗೆ 10.30ಕ್ಕೆ ರಾಮ್ ಅಂಡ್ ಕೋ ವೃತ್ತದಿಂದ ಪುರುಷ ಬೈಕ್ ಜಾಥಾ ನಡೆಯಲಿದ್ದು, ಅ.6 ರಂದು ಬೆಳಗ್ಗೆ 10.30ಕ್ಕೆ ರಾಮ್ ಅಂಡ್ ಕೋ ಸರ್ಕಲ್ ನಿಂದ ಮಹಿಳಾ ಬೈಕ್ ಜಾಥಾ ಅ, 7 ರಂದು ದುರ್ಗಾಂಬಿಕಾ ದೇವಸ್ಥಾನದಿಂದ ದುರ್ಗಾದೌಡ್ ಕಾರ್ಯಕ್ರಮ ನಡೆಯಲಿದೆ. ಅ. 8 ರಂದು ಬೆಳಗ್ಗೆ ವೆಂಕಟೇಶ್ವರ ವೃತ್ತದಿಂದ ಬೃಹತ್ ಶೋಭಾಯಾತ್ರೆ
ತಿಳಿಸಿದರು.
ಕೋಡಿಯಾಲ ಪುಣ್ಯಕೋಟಿ ಮಠದ ಜಗದೀಶ ಸ್ವಾಮೀಜಿ ಹಿರೇಹಡಗಲಿ ಸ್ಮಸ್ತನ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ, ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಸಂಜೆ 4 ಗಂಟೆಗೆ ಹೊಂಡದ ಸರ್ಕಲ್ ಸಾರ್ವಜನಿಕ ಸಭೆ ನಡೆಯಲಿದೆ. 5 ಗಂಟೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಂಬುಚ್ಛೇದನ ಮಾಡುವರು. ಇದಾನಂತರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಂಕರ್ ನಾರಾಯಣ, ವೀರೇಶ್, ಅಜಯ್, ರಾಜಶೇಖರ್,ರವೀಂದ್ರ, ಆರ್ .ಪ್ರತಾಪ್ , ಬಸವರಾಜ್, ಅರುಣ್, ಸತೀಶ್ ,ಯೋಗೇಶ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ರು.