ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ನಿಂದ ಬಂದ ಮೇಲೆಯೂ ಕನಿಷ್ಠ 14 ದಿನ ಮನೆಯಲ್ಲಿ ಕ್ವಾರಂಟೈನ್ ಆಗಿರೋದು ಕಡ್ಡಾಯ. ಹೀಗಾಗಿ ಡಿಸ್ಚಾರ್ಜ್ ಬಳಿಕ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದು ಇಲ್ಲಿದೆ.
ಮುನ್ನೆಚ್ಚರಿಕೆ ಕ್ರಮಗಳು ಈ ರೀತಿ ಇದೆ
- ಬಿಡುಗಡೆಯಾದ ನಂತರ 14 ದಿನಗಳು ಮನೆಯಲ್ಲೇ ಕ್ವಾರಂಟೈನ್ ಆಗಿರಬೇಕು.
- ವೈದ್ಯರು ತಿಳಿಸಿರುವ ಚಿಕಿತ್ಸೆ ಹಾಗೂ ಇತರ ಸಾಮಾನ್ಯ ಅಂಶಗಳನ್ನು ಮುಂದುವರಿಸುವುದು.
- ಇತರರ ಸಂಪರ್ಕಕ್ಕೆ ಬಾರದ ಮನೆಯಲ್ಲಿ ಪ್ರತ್ಯೇಕವಾಗಿರುವುದು.
- ನೀವು ಇರುವ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು.
- ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು
- ಆಲ್ಕೋಹಾಲ್, ತಂಬಾಕು ಹಾಗೂ ಇನ್ನಾವುದೇ ಡ್ರಗ್ಸ್ ಗಳನ್ನು ಸೇವಿಸದೇ ಇರುವುದು.
- ಆರೋಗ್ಯ ಸಮಸ್ಯೆ ಪ್ರಾರಂಭವಾದರೆ ಕೂಡಲೇ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವುದು.
- ಈ ಸಮಯದಲ್ಲಿ ಸಾಧ್ಯವಾದಷ್ಟು ಪ್ರತ್ಯೇಕ ಕೋಣೆಗೆ ಸೀಮಿತವಾಗಿರಿ ಹಾಗೂ ಮಾಸ್ಕ್ ಬಳಕೆ,
- ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು.
- ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವ ಸ್ಥಿತಿಯನ್ನು ಮುಂದುವರಿಸುವುದು



