ಮುಂಬೈ: ಕೊರೊನಾ ಎಂಬ ಮಹಾಮಾರಿಗೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಈ ಕೊರೊನಾ ಸಾಕಷ್ಟು ಜನರ ಬದುಕು ಬದಲಿಸಿದೆ. ಹೊಟ್ಟೆಪಾಡಿಗಾಗಿ ಹಳ್ಳಿ ತೊರೆದು ನಗರ ಪ್ರಶಗಳತ್ತ ಮುಖ ಮಾಡಿದ್ದವರು ಈಗ ಕೊರೊನಾ ನಂತರ ನಮ್ಮೂರು ನಮಗೆ ಹೆಮ್ಮೆ ಎನ್ನುವಂತೆ ನಗರದಿಂದ ವಾಪಸ್ ಆಗುತ್ತಿದ್ದಾರೆ. ಇದಕ್ಕೆ ಸೆಲೆಬ್ರಟಿಗಳೂ ಹೊರತಾಗಿಲ್ಲ. ಅವರು ಕೂಡ ಈ ಕೊರೊನಾ ಬಿಡುವಿನ ಸಮಯದಲ್ಲಿ ತಮಗೆ ಇಷ್ಟದ ಕೆಲಸ ಮಾಡುವ ಮೂಲಕ ತಮ್ಮನ್ನು ಬೇರೆ ಕೆಲಸದಲ್ಲಿ ತಾವುತೊಡಗಿಸಿಕೊಳ್ಳುತ್ತಿದ್ಧಾರೆ.
ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಕೂಡ ಕೊರೊನಾ ಸಮಯವನ್ನು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಅವರು ಗದ್ದೆಗೆ ಇಳಿದು ಟ್ಯಾಕ್ಟರ್ ಓಡಿಸುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Farminggg pic.twitter.com/RZREIOEHo4
— Salman Khan (@BeingSalmanKhan) July 19, 2020
ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ಬಳಿಕ ಅದು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಹೇರಲಾಯಿತು. ಪರಿಣಾಮ ಹಲವು ಮಂದಿ ಕೃಷಿಯತ್ತ ಮುಖಮಾಡಿದ್ದಾರೆ. ಅಂತೆಯೇ ಲಾಕ್‍ಡೌನ್ ಹೇರಲಾದ ದಿನದಿಂದ ಸಲ್ಮಾನ್ ಖಾನ್ ಅವರು ಕೂಡ ಪನ್ವೆಲ್ ಫಾರ್ಮ್ ಹೌಸ್‍ನಲ್ಲೇ ಉಳಿದುಕೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಸಲ್ಮಾನ್ ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ನಟ ಅಪ್ಲೋಡ್ ಡಿದ್ದಾರೆ.ರೈತರ ಪರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದು ಹಾಕುವ ಮೂಲಕ ಭಾರೀ ಟ್ರೋಲ್ ಆಗಿದ್ದರು. ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅವರ ಫೋಟೋ ಹಾಕಿಕೊಂಡಿದ್ದ ಸಲ್ಮಾನ್, ‘ಎಲ್ಲ ರೈತರನ್ನು ಗೌರವಿಸಿ’ ಎಂದು ಬರೆದುಕೊಂಡಿದ್ದರು. ಫೋಟೋದಲ್ಲಿ ಹೊಲದಲ್ಲಿ ನಟ ಕುಳಿತಿದ್ದಾರೆ. ಜೊತೆಗೆ ಅವರ ಮೈತುಂಬಾ ಕೆಸರನ್ನು ಬಳಿಯಲಾಗಿದೆ. ಇದನ್ನು ಕಂಡ ನೆಟ್ಟಿಗರು ಯಾವ ರೈತ ಈ ರೀತಿ ಹೊಲದಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಾನೆ ಎಂದು ಕಮೆಂಟ್ ಮಾಡುವ ಮೂಲಕ ಸಲ್ಮಾನ್ ಅವರನ್ನು ಕಾಲೆಳೆದಿದ್ದರು.ಇದಕ್ಕೂ ಮೊದಲು ಕುದುರೆಗೆ ಹುಲ್ಲು ತಿನ್ನಿಸಿ ತಾನು ತಿಂದು ಸುದ್ದಿಯಾಗಿದ್ದರು.
https://www.instagram.com/p/CCgg4IIldKV/
ಇನ್‍ಸ್ಟಾಗ್ರಾಮ್ ನಲ್ಲಿ ಇನ್ನೊಂದು ಪೋಸ್ಟ್ ಹಾಕಿದ್ದ ಸಲ್ಮಾನ್ ಖಾನ್, ನಾವು ತಿನ್ನುವ ಪ್ರತಿಯೊಂದು ಅನ್ನದ ಮೇಲೆ ನಮ್ಮ ಹೆಸರು ಬರೆದಿರುತ್ತದೆ. ‘ಜೈ ಜವಾನ್ ಜೈ ಕಿಸಾನ್’ ಎಂದು ಬರೆದುಕೊಂಡಿದ್ದರು. ಜೊತೆಗೆ ಭತ್ತ ನಾಟಿ ಮಾಡುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದರು.
https://www.instagram.com/p/CCnprHGFr4e/