ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿಂದು ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಒಂದೇ ದಿನ ಬರೋಬ್ಬರಿಗೆ 70 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 4 ಮಂದಿ ಮೃತಪಟ್ಟಿದ್ಧಾರೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 516ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾದಿಂದ ಗುಣಮುಖರಾದ 5 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಬಿಡುಗಡೆಯಾದವರ ಸಂಖ್ಯೆ 344ಕ್ಕೆ ಏರಿಕೆಯಾಗಿದೆ. ಇಂದು 4 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 155 ಪಾಸಿಟಿವ್ ಕೇಸ್ ಗಳು ಸಕ್ರಿಯವಾಗಿವೆ.
ಇಂದು ಪತ್ತೆಯಾದ 70 ಕೇಸ್ ಗಳಲ್ಲಿ ದಾವಣಗೆರೆಯಲ್ಲಿ 35, ಚನ್ನಗಿರಿಯಲ್ಲಿ 10 , ಹೊನ್ನಾಳಿಯಲ್ಲಿ 07,ಹರಿಹರ 07,ಜಗಳೂರು 08 ಹಾಗೂ ರಾಣೇಬೆನ್ನೂರಿನ 02 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಇಂದು ಕೊರೊನಾದಿಂದ ರಾಣೇಬೆನ್ನೂರಿನ 53 ವರ್ಷದ ಪುರುಷ, ದಾವಣಗೆರೆಯ ದೇವರಾಜ್ ಬಡಾವಣೆಯ 70 ವರ್ಷದ ವೃದ್ಧ, ದಾವಣಗೆರೆ ಜಾಲಿನಗರದ 57 ವರ್ಷದ ಮಹಿಳೆ ಸೇರಿ ಮೂರು ಸಾರಿ ಕೇಸ್ ನಿಂದ ಮೃತಪಟ್ಟಿದ್ದಾರೆ ಹಾಗೂ ದಾವಣಗೆರೆಯ ಎನ್ ಆರ್ ರಸ್ತೆಯ 62 ವರ್ಷದ ಮಹಿಳೆ ಡಯಬಿಟಿಸ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ.



