ಭೋಪಾಲ್: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸರಳವಾಗಿ ವಿವಾಹವಾಗುವುದು ಸಾಮಾನ್ಯವಾಗಿದೆ. ಆದರೆ, ಮಧ್ಯಪ್ರದೇಶದ ಯುವಕನೊಬ್ಬ ಒಂದೇ ದಿನ , ಒಂದೇ ಮಂಟಪದಲ್ಲಿ ಇಬ್ಬರ ಜೊತೆ ವಿವಾಹವಾಗಿದ್ದಾನೆ.
ಮಧ್ಯಪ್ರದೇಶದ ಬೈತುಲ್ ಮೂಲದ ಸಂದೀಪ್ ಉಯಿಕೆ ಇಬ್ಬರು ಯುವತಿರನ್ನು ಮದುವೆಯಾದ ಯುವಕ. ಬೈತುಲ್ ಜಿಲ್ಲಾ ಕೇಂದ್ರ ಘೋಡಡೋಂಗ್ರಿ ಬ್ಲಾಕ್‍ನ ಕೆರಿಯಾ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಈ ವಿವಾಹಕ್ಕೆ ಮೂರು ಕುಟುಂಬಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆದಿರುವುದು ಮತ್ತೊಂದು ವಿಶೇಷ…
ಒಂದೇ ದಿನ ಇಬ್ಬರು ಯುವತಿಯನ್ನು ವಿವಾಹವಾದ ಬಗ್ಗೆ ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ. ವಧುಗಳಲ್ಲಿ ಒಬ್ಬರು ಹೋಶಂಗಾಬಾದ್ ಜಿಲ್ಲೆಯವರಾಗಿದ್ದು, ಮತ್ತೊಬ್ಬ ವಧು ಘೋಡಡೋಂಗ್ರಿ ಬ್ಲಾಕ್‍ನ ಕೊಯಲಾರಿ ಗ್ರಾಮದವಳಾಗಿದ್ದಾಳೆ ಎಂದು ತಿಳಿದು ಬಂದಿದೆ.ವರ ಸಂದೀಪ್ ಭೋಪಾಲ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಹೋಶಂಗಾಬಾದ್‍ನ ಯುವತಿಯ ಪರಿಯಚವಾಗಿತ್ತು. ಪರಿಯಚ ಸ್ನೇಹವಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಸಂದೀಪ್ ಕುಟುಂಬದವರು ಮಗನಿಗಾಗಿ ಹುಡುಗಿಯನ್ನು ಹುಡುಕಿದ್ದರು. ಆಗ ಮನೆಯಲ್ಲಿ ವಿಚಾರ ಗೊತ್ತಾಗಿ ಜಗಳವಾಗಿದೆ. ಈ ಜಗಳವಿಕೋಪಕ್ಕೆ ತಿರುಗಿ ಅದನ್ನು ಪರಿಹರಿಸಲು ಮೂರು ಕುಟುಂಬಗಳು ಪಂಚಾಯತಿ ಸೇರಿದ್ದಾರೆ. ಆಗ ಇಬ್ಬರೂ ಯುವತಿಯರು ಸಂದೀಪ್ ಜೊತೆ ವಾಸಿಸಲು ಸಿದ್ಧರಾಗಿದ್ದರೆ ಮಾತ್ರ ಈ ವಿವಾಹವನ್ನು ನೇರವೇರಿಸಬಹುದು ಎಂದು ಪಂಚಾಯಿತಿ ತೀರ್ಮಾನಿಸಿದೆ.ಈ ನಿರ್ಧಾರಕ್ಕೆ ಇಬ್ಬರು ಯುವತಿಯರು ಸಂದೀಪ್‍ನನ್ನು ಮದುವೆಯಾಗಲು ಒಪ್ಪಿಗೆ ಸೂಚಿದ್ದಾರೆ. ಹೀಗಾಗಿ ಸಂದೀಪ್ ಯುವತಿಯರ ಒಪ್ಪಿಗೆ ಮೇರೆಗೆ ಇಬ್ಬರನ್ನೂ ಮದುವೆಯಾಗಿದ್ದಾನೆ. ಕೆರಿಯಾ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆದಿದ್ದು, ಇಬ್ಬರು ವಧುವಿನ ಜೊತೆ ಸಂದೀಪ್ ಸಪ್ತಪದಿ ತುಳಿದಿದ್ದಾನೆ.
ಈ ಮದುವೆಗೆ ಮೂರು ಕುಟುಂಬದಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ.ಹೀಗಾಗಿ ಮೂವರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು ಎಂದು ಪಂಚಾಯಿತಿ ಉಪಾಧ್ಯಕ್ಷ ಮಿಶ್ರಿಲಾಲ್ ಪರಾಟೆ ಹೇಳಿದ್ದಾರೆ. ಮದುವೆಯಲ್ಲಿ ವರ, ಇಬ್ಬರು ವಧುವಿನ ಕುಟುಂಬ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.
ಕೊರೊನಾ ಸಂಕಷ್ಟದಲ್ಲಿ ಒಂದು ಮದುವೆ ಆಗೋದೇ ಕಷ್ಟ ಎನ್ನುವಂತಹ ಸ್ಥಿತಿಯಲ್ಲಿ , ಇಬ್ಬರನ್ನು ವಿವಾಹವಾಗುವ ನಿರ್ಧಾರ ಅಚ್ಚರಿ ಮೂಡಿಸಿದೆ.



