ಡಿವಿಜಿ ಸುದ್ದಿ, ದಾವಣಗೆರೆ: ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಎರಡು ಕೇಸ್ ಹಿನ್ನೆಲೆ ಕಂಟೈನೆ ಮೆಂಟ್ ವಲಯವನ್ನಾಗಿ ಘೋಷಣೆಸಲಾಗಿದೆ.
ರೋಗಿ ಸಂಖ್ಯೆ 26985 ಹಾಗೂ ರೋಗಿ ಸಂಖ್ಯೆ 26986 ನೆಲೆಸಿದ್ದ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮವನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಂಟೈನ್‍ಮೆಂಟ್ ವಲಯ ಘೋಷಿಸಿಸಲಾಗಿದೆ. ಜುಲೈ 8 ರಂದು ಇಬ್ಬರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.
ಪೂರ್ವಕ್ಕೆ ತುಂಗಾ ಮೇಲ್ದಂಡೆ ಕಾಲುವೆ, ಪಶ್ಚಿಮಕ್ಕೆ ನಿಂಗಪ್ಪರ ಮನೆ, ಉತ್ತರಕ್ಕೆ ಪಂಚಾಯತ್ ರಸ್ತೆ, ದಕ್ಷಿಣಕ್ಕೆ ಬಸವೇಶ್ವರ ದೇವಸ್ಥಾನ ರಸ್ತೆ ಹಾಗೂ ಈ ಪ್ರದೇಶದ 200 ಮೀಟರ್ ಬಫರ್ ಝೋನ್ ವ್ಯಾಪ್ತಿಯ ಎಲ್ಲೆಯಲ್ಲಿರುವ ಪೂರ್ವಕ್ಕೆ ತುಂಗಾ ಮೇಲ್ದಂಡೆ ಕಾಲುವೆ, ಪಶ್ಚಿಮಕ್ಕೆ ಎ.ಕೆ ಕಾಲೋನಿ, ಉತ್ತರಕ್ಕೆ ಸೈಟ್ ನಂ.85, ದಕ್ಷಿಣಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ವ್ಯಾಪ್ತಿಯಲ್ಲಿದ್ದ 13 ಮನೆಗಳು, 78 ಜನಸಂಖ್ಯೆ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.



