ಡಿವಿಜಿ ಸುದ್ದಿ, ಜಗಳೂರು: ಪಟ್ಟಣದ ಶ್ರೀ ದೊಡ್ಡ ಮಾರಿಕಾಂಬ ದೇವಸ್ಥಾನ ಹತ್ತಿರದ ಹೊರಕೆರೆಯಲ್ಲಿ ಇಬ್ಬರಿಗೆ ಹಾಗೂ ಕಲ್ಲೇಶ್ವರ ಲಾಡ್ಜ್ ಸಮೀಪ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ನಾಗರಾಜ್ ತಿಳಿಸಿದ್ಧಾರೆ.
ಶ್ರೀ ಮಾರಿಕಾಂಬ ದೇವಸ್ಥಾನದ ಹತ್ತಿರ ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಬಂದ ಇಬ್ಬರು ವ್ಯಕ್ತಿಗಳು ಬೆಂಗಳೂರಿನಿಂದ ಬಂದಿದ್ದಾರೆ. ಇನ್ನೊಬ್ಬ ಗುಜರಾತಿನಿಂದ ವಿಂಡ್ ಫ್ಯಾನ್ ಕೆಲಸಕ್ಕೆ ಬಂದವನಾಗಿದ್ದಾನೆ. ಇವರ ಗಂಟಲು ದ್ರವ ಪರೀಕ್ಷೆ ವರದಿ ನಿನ್ನೆ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈಗಾಗಲೇ ದಾವಣಗೆರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದರು.
ಪಾಸಿವ್ ಪತ್ತೆಯಾದ ವ್ಯಕ್ತಿಗಳು ಯಾವ ಪ್ರದೇಶದಲ್ಲಿ ಓಡಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಿದ್ದು, ಅವರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲು ದ್ರವನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.
ಪಾಸಿಟಿವ್ ಪತ್ತೆಯಾದ ತಕ್ಷಣ ಮಾರಿಕಾಂಬ ದೇವಸ್ಥಾನ ಮತ್ತು ಕಲ್ಲೇಶ್ವರ ಲಾಡ್ಜ್ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಪ್ರದೇಶದ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜು ಬಣಕಾರ್, ವೃತ್ತ ನಿರೀಕ್ಷಕ ದುರ್ಗಪ್ಪ , ಪಟ್ಟಣ ಪಂಚಾಯ್ತಿ ಕಂದಾಯ ನಿರೀಕ್ಷಕ ಸಂತೋಷಕುಮಾರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.



