ಡಿವಿಜಿ ಸುದ್ದಿ, ಮೈಸೂರು: ರಾಜ್ಯ ಸರ್ಕಾರ ಕೋವಿಡ್–19 ನಿರ್ವಹಣೆಗೆ ಮಾಡಿದ ವೆಚ್ಚದ ಕುರಿತು ಲೆಕ್ಕ ನೀಡುವವರೆಗೂ ನಾನು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದಾಖಲೆಗಳನ್ನು ಸಾರ್ವಜನಿಕರ ಮುಂದಿಡಬೇಕು. ನೀಡದಿದ್ದರೆ ಭ್ರಷ್ಟಾಚಾರ ಒಪ್ಪಿಕೊಂಡಂತಾಗುತ್ತದೆ. ಪ್ರಾಮಾಣಿಕವಾಗಿದ್ದರೆ ನಿಮಗೇಕ ಭಯ. ಸೂಕ್ತ ತನಿಖೆ ನಡೆಸಲೇಬೇಕು. ಈ ಬ್ಗಗೆ ಸದನ ಸಮಿತಿ ರಚಿಸಲಿ ಎಂದು ಒತ್ತಾಯಿಸಿದರು.
ಕೊರೊನಾ ವಿಚಾರದಲ್ಲಿಸರ್ಕಾರ ಏನು ಮಾಡಿದೆ. ಬಡವರಿಗೆ ಊಟ ಕೊಟ್ಟಿಲ್ಲ, ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕು ಇಲ್ಲದ ಸಮಯದಲ್ಲಿ ಲಾಕ್ಡೌನ್ ಮಾಡಿದರು. ಸೋಂಕು ವಿಪರೀತ ಹೆಚ್ಚುತ್ತಿದ್ದು, ಈಗ ಲಾಕ್ಡೌನ್ ಮಾಡಬೇಕಿತ್ತು. ಆದರೆ, ಈಗ ಸಾಧ್ಯವಿಲ್ಲ, ಅರ್ಥಿಕತೆ ಕುಸಿದು ಹೋಗುತ್ತದೆ, ವೇತನ ನೀಡಲು ಕಾಸಿಲ್ಲದಂತಾಗುತ್ತದೆ ಎಂದು ಹೇಳುತ್ತಿದ್ದಾರೆ. ಇವರಿಗೆ ಜೀವ ಮುಖ್ಯವೇ ಅಥವಾ ಆರ್ಥಿಕತೆ ಮುಖ್ಯವೇ ಎಂದು ಪ್ರಶ್ನಿಸಿದರು.



