ಡಿವಿಜಿ ಸುದ್ದಿ, ಜಗಳೂರು: 2020-21 ನೇ ಸಾಲಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ಕಚೇರಿಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬೆಳೆಗಳ ಪ್ರದೇಶ ವಿಸ್ತರಣೆ, ಕೃಷಿ ಹೊಂಡ, ಸಮುದಾಯ ಕೃಷಿಹೊಂಡ, ಪ್ಯಾಕ್ ಹೌಸ್ ಘಟಕ, ಸಂಸ್ಕರಣಾ ಘಟಕಗಳನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಈ ಯೋಜನೆಯ ಸೌಲಭ್ಯ ಪಡೆಯಲು ತೋಟಗಾರಿಕೆ ಇಲಾಖೆ ಜಗಳೂರು ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ಅಧಿಕಾರಿಗಳಾದ ಅನಂತ್ ಕುಮಾರ್ ಕೆ.ಪಿ (ರೈ.ಸಂ. ಕೇಂದ್ರ ಕಸಬಾ) ಮೋ ಸಂ : 9900796617, ಪ್ರಸನ್ನ ಕುಮಾರ್ ಜಿ.ಎಚ್ (ರೈ.ಸಂ ಕೇಂದ್ರ ಬಿಳಿಚೋಡು) ಮೊ ಸಂ: 7625078047, ಶಿವಣ್ಣ. ಜೆ (ರೈ.ಸಂ ಕೇಂದ್ರ ಸೊಕ್ಕೆ) ಮೋ ಸಂ: 6362315280 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.



