ಡಿವಿಜಿ ಸುದ್ದಿ, ದಾವಣಗೆರೆ: ವರದಕ್ಷಿಣೆ ಕಿರಿಕುಳ ಹಿನ್ನೆಲೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯ ವಿಮಾನಮಟ್ಟಿಯಲ್ಲಿ ನಡೆದಿದೆ.
ರಂಜಿತಾಬಾಯಿ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು, ಇತ್ತೀಚೆಗೆ ರವಿ ಎಂಬಾತನ ಜೊತೆ ವಿವಾಹವಾಗಿತ್ತು. ವಿವಾಹದ ಸಂದರ್ಭದಲ್ಲಿ 10 ತೋಲ ಬಂಗಾರ, 1 ಲಕ್ಷ ರೂಪಾಯಿ ವರದಕ್ಷಿಣೆ ನೀಡಲಾಗಿತ್ತು. ಮದುವೆಯಾದ ಬಳಿಕ ಬೆಂಗಳೂರಲ್ಲಿ ನೆಲೆಸಿದ್ದ ಇಬ್ಬರು ಲಾಕ್ ಡೌನ್ ಹಿನ್ನೆಲೆ ದಾವಣಗೆರೆಗೆ ಬಂದಿದ್ದರು.
ಗಂಡನ ಮನೆಯವರು ವರದಕ್ಷಿಣೆ ಪೀಡಿಸುತ್ತಿದ್ದರು. ಇದರಿಂದ ನಮ್ಮ ಮಗಳು ಬೇಸತ್ತಿದ್ದಳು. ಇದು ಆತ್ಮಹತ್ಯೆಯಲ್ಲ. ಕೊಲೆ ಎಂದು ರಂಜಿತಾಬಾಯಿ ಪೋಷಕರು ಆರೋಪಿಸಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



