ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.13 ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಬಗ್ಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯ ನಂತರ ಪ್ರಭಾರ ಜಿಲ್ಲಾಧಿಕಾರಿ ನಜ್ಮಾ.ಜಿ ಅದ್ದೂರಿಯಾಗಿ ಆಚರಿಸಲು ಸೂಚನೆ ನೀಡಿದರು. ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯಿಂದ ಸೇರಿದಂತೆ ಹಲವಾರು ಜಿಲ್ಲೆಗಳು ನೆರೆಗೆ ತುತ್ತಾಗಿ ಅನೇಕ ಜನ, ಜಾನುವಾರುಗಳ ಜೀವಕ್ಕೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಜಯಂತಿ ಆಚರಣೆಗೆ ಸರ್ಕಾರ ನೀಡಿರುವ ಜಿಲ್ಲಾ ಮಟ್ಟಕ್ಕೆ ರೂ.1 ಲಕ್ಷ ಮತ್ತು ತಾಲ್ಲೂಕು ಮಟ್ಟಕ್ಕೆ ರೂ.25 ಸಾವಿರ ಅನುದಾನವನ್ನು ನೆರೆ ಸಂತ್ರಸ್ತರ ನೆರವಿಗೆ ನೆರೆ ಸಂತ್ರಸ್ತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಬಹುದು ಎಂದು ಪ್ರಭಾರ ಜಿಲ್ಲಾಧಿಕಾರಿ ನಜ್ಮಾ.ಜಿ ತಿಳಿಸಿದರು.
ಸಭೆಯಲ್ಲಿದ್ದ ಮುಖಂಡರು ನೆರೆ ಪರಿಹಾರಕ್ಕೆ ಈಗಾಗಲೇ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದೇವೆ. ಅದ್ದರಿಂದ ಅದ್ದೂರಿಯಾಗಿ ಆಚರಿಸಬೇಕು ಎಂದು ಪಟ್ಟು ಹಿಡಿದರು ಕೊನೆಯಲ್ಲಿ ಅದ್ಧೂರಿಯಾಗಿ ಜಯಂತಿ ಆಚರಿಸಲು ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಜಿ ಪಂ ಸದಸ್ಯ ಎನ್.ಲೋಕೇಶಪ್ಪ , ನಾಯಕ ಸಮಾಜದ ಮಾಜಿ ಅಧ್ಯಕ್ಷ ಗುಮ್ಮನೂರು ಮಲ್ಲಿಕಾರ್ಜುನಪ್ಪ, ಮುಂಖಡರಾದ ಅಣ್ಣಾಪುರ ಹೇಮಣ್ಣ , ಅಣಜಿ ಅಂಜಿನಪ್ಪ, ಮಲ್ಲಾಪುರ ದೇವರಾಜ್ , ಶ್ಯಾಗಲೆ ಸತೀಶ್, ಎನ್.ಡಿ.ಮುರಿಗೆಪ್ಪ, ಕರಿಲಕ್ಕೇನಹಳ್ಳಿ ತಿಪ್ಪಣ್ಣ, ಆರನೇಕಲ್ ಹನುಮಂತಪ್ಪ, ನಾಗನೂರು ನಾಗೇಂದ್ರಪಪ್ಪ, ಆಲೂರು ಹನುಮಂತಪ್ಪ, ಮುಖಂಡರಾದ ಗೋಣಿವಾಡ ಬಸವರಾಜಪ್ಪ, ಐಗೂರು ಹನುಮಂತಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ್ ರೆಡ್ಡಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.