ಡಿವಿಜಿಸುದ್ದಿ.ಕಾಂ, ದಾವಣಗೆರೆ: ನಾಳೆ ಹಿಂದೂ ಮಹಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಿದ್ದು, ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಮೆರವಣಿಗೆಯು ಬೆಳಗ್ಗೆ ೧೧ ಗಂಟೆಗೆ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಲಿದ್ದು, ಎವಿಕೆ ರಸ್ತೆ, ಬಿಎಸ್‌ಸಿ ಶಾಪ್, ಚೇತನಾ ಹೋಟೆಲ್, ಅಂಬೇಡ್ಕರ್ ವೃತ್ತ, ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿಬಿ ರಸ್ತೆ, ಎಂಬಿ ವೃತ್ತ, ಹಳೆ ಬಸ್ ನಿಲ್ದಾಣ, ದೇವರಾಜ ಅರಸು ವೃತ್ತ, ರೈಲ್ವೆ ನಿಲ್ದಾಣ, ಪಿ.ಜೆ ಹೋಟೆಲ್ ಕ್ರಾಸ್, ರಾಣಿ ಚನ್ನಮ್ಮ ವೃತ್ತ, ಸಂಗೋಳ್ಳಿ ರಾಯಣ್ಣ ಸರ್ಕಲ್ ಮೂಲಕ ಬಾತಿ ಕೆರೆಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ.
ಯಾವ ಮಾರ್ಗದಲ್ಲಿ ಬದಲಾವಣೆ?
- ಚಿತ್ರದುರ್ಗ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಮತ್ತು ವಾಹನಗಳು ಬಾಡಾ ಕ್ರಾಸ್ ಮುಖಾಂತರ ಪಿ.ಬಿ ರಸ್ತೆಯ ಅಗ್ನಿಶಾಮಕದಳ ಠಾಣೆಯ ಮತ್ತು ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ನಿಲುಗಡೆ ಮಾಡಿ, ಅಲ್ಲಿಂದಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು.
- ಚನ್ನಗಿರಿ ಕಡೆಯಿಂದ ಬರುವ ವಾಹನಗಳು ಹದಡಿ ರಸ್ತೆಯ ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿರುವ ಯುಬಿಡಿಟಿ ಕಾಲೇಜು ಮುಂಭಾಗ ನಿಲ್ಲಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಅದೇ ಮಾರ್ಗದಲ್ಲಿ ವಾಪಾಸ್ಸು ಹೋಗುವುದು.
- ಜಗಳೂರು ಕಡೆಯಿಂದ ಬರುವ ವಾಹನಗಳು ಆರ್‌ಎಂ ರಸ್ತೆ ಮೂಲಕ ಗಣೇಶ್ ಹೋಟೆಲ್ ಬಳಿ ತಿರುವು ಪಡೆದು ಪಿಬಿ ರಸ್ತೆಯ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು ಅಥವಾ ಈರುಳ್ಳಿ ಮಾರುಕಟ್ಟೆ ಮುಖಾಂತರ ಮೇಲು ಸೇತುವೆ ಮೂಲಕ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ತಲುಪಬಹುದು.
- ಮೆರವಣಿಗೆ ಹದಡಿ ರಸ್ತೆಯಲ್ಲಿ ಸಾಗುವಾಗ ಶಾಮನೂರು ಕಡೆಯಿಂದ ಬರುವ ವಾಹನಗಳು ಬಾಪೂಜಿ ಬ್ಯಾಂಕ್ ಸಮುದಾಯ ಭವನ ರಸ್ತೆ ಮೂಲಕ ಡಿಸಿ ಸರ್ಕಲ್, ಸಂಗೋಳ್ಳಿ ರಾಯಣ್ಣ ಸರ್ಕಲ್ ಮೂಲಕ ಪಿಬಿ ರಸ್ತೆ ಸೇರಬೇಕು.
- ಮೆರವಣಿಗರ ಪಿಬಿ ರಸ್ತೆಯಲ್ಲಿ ಸಾಗುವಾಗ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ ಬಾಡಾ ಕ್ರಾಸ್ ಮೂಲಕ ಬೆಂಗಳೂರು ಕಡೆ ಹೋಗಬೇಕು. ಇನ್ನು ಹರಿಹರ ಕಡೆಯಿಂದ ಬರುವ ವಾಹನಗಳು ಸಂಗೋಳ್ಳಿರಾಯಣ್ಣ ಸರ್ಕಲ್ ನಿಂದ ಡಿಸಿ ಸರ್ಕಲ್ ಮೂಲಕ ಶಾಮನೂರು ಮೆಲು ಸೇತುವೆ ಮೂಲಕ ಬಾಡಾ ಕ್ರಾಸ್ ಕಡೆ ಹೋಗಬೇಕು.
ಪಾರ್ಕಿಂಗ್ ವ್ಯವಸ್ಥೆ
ಕಾರು ಮತ್ತು ದ್ವಿ ಚಕ್ರವಾಹನಗಳು: ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಬಸ್ ನಿಲ್ದಾಣದ ಒಳಗಡೆ
ಭಾರೀ ವಾಹನನಗಳು: ಹಳೆ ವಾಣಿ ಹೊಂಡಾ ಶೋರೂಮ್ ಮತ್ತು ವಿನೋಬನಗರ ೧ನೇ ಮೇನ್ ರಸ್ತೆಯ ನಗಹರಿಶಟ್ಟಿ ಕಲ್ಯಾಣ ಮಂಟಪ
ಸಂಚಾರ ಸಂಪೂರ್ಣ ನಿಷೇಧಿತ ರಸ್ತೆಗಳು
ಎವಿಕೆ ಕಾಲೇಜ್ ರಸ್ತೆ, ಚೇತನ ಹೋಟೆಲ್ ರಸ್ತೆ, ಹದಡಿ ರಸ್ತೆ, ಲಾಯರ್ ರಸ್ತೆ, ಪಿಬಿ ರಸ್ತೆ