ಡಿವಿಜಿ ಸುದ್ದಿ, ಹಳೇಬೀಡು: ಸಿರಿಗೆರೆಯ ತರಳಬಾಳು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ-2020 ಏಳನೇ ದಿನದ ನೇರ ಪ್ರಸಾರವನ್ನು ವೀಕ್ಷಿಸಿ.
ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಚಿತ್ರದುರ್ಗದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ಸಿ. ವೀರಭದ್ರಪ್ಪ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಬೃಹತ್ ನೀರಾವರಿ ಇಲಾಖೆ ಕಾರ್ಯದರ್ಶಿ ಲಕ್ಷ್ಮಣರಾವ್ , ಎಂಎಲ್ ಸಿ ಭೋಜೇಗೌಡ ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸದಲ್ಲಿ ‘ಕಲ್ಯಾಣ ರಾಜ್ಯ ಕುರಿತು ಆರ್.ಟಿ ಮಜ್ಜಿಗಿ, ವಚನಗಳಲ್ಲಿ ನೀತಿ ಸಂಹಿತೆ ಕುರಿತು ಡಾ. ಸಿ. ಸೋಮಶೇಖರ್, ಬಾಹ್ಯಾಕಾಶ ಸಂಶೋಧನೆಗಳ ಪ್ರಯೋಜನೆಗಳು ಕುರಿತು ಕುರಿತು ಡಾ. ಟಿ.ಕೆ. ಅನುರಾಧ, ರೊಬೊಟಿಕ್ ಸರ್ಜರಿ ಕುರಿತು ಡಾ. ಸೋಮಶೇಖರ್ ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರಾದ ಎ.ಎಸ್. ಬಸವರಾಜು,ಡಿ, ಮಲ್ಲೇಶ್,ಸಿ.ಎಸ್. ಪುಟ್ಟೇಗೌಡ, ಸಾಹಿತಿ ಬೇಲೂರು ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.