ಡಿವಿಜಿಸುದ್ದಿ.ಕಾಂ, ದಾವಣಗೆರೆ: ಬಿಜೆಪಿ ಮೊದಲು ಸೇಡಿನ ರಾಜಕಾರಣ ಬಿಡಲಿ. ಈ ಸೇಡಿನ ರಾಜಕಾರಣದಿಂದ ರಾಜ್ಯದಲ್ಲಿ ಗಲಾಟೆ , ದ್ವೇಷ ರಾಜಕಾರ ಎಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.
ದಾವಣಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ಬಂಧನ ಪ್ರಕರಣದಲ್ಲಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನವರ ಮನೆ ಮೇಲೆ ಮಾತ್ರ ರೈಡ್ ಮಾಡುತ್ತಿದ್ದಾರೆ. ಇದರಿಂದ ರಾಜಕಾರಣ ದಲ್ಲಿ ಸೇಡಿನ ವಾತಾವರಣ ನಿರ್ಮಾಣವಾಗಿ ರಾಜ್ಯಾದ್ಯಂತ ಗಲಾಟೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮೊದಲು ಸೇಡಿನ ರಾಜಕಾರಣ ಬಿಡಿ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಅಧಿಕಾರ ಇದೆ ಎಂದು ಜೆಡಿಎಸ್, ಕಾಂಗ್ರೆಸ್ ನವರ ಮನೆ ಮೇಲೆ ಮಾತ್ರ ದಾಳಿ ಮಾಡುತ್ತಿದೆ. ಬಿಜೆಪಿಯವರ ಮನೆ ಮೇಲೆ ಏಕೆ ಮಾಡುತ್ತಿಲ್ಲ. ಇಡಿ, ಐಟಿ, ಸಿಬಿಐ ನಂತಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ದ್ವೇಷದ ರಾಜಕಾರಣದಿಂದ ಗಲಾಟೆ ನಡೆಯುತ್ತಿದೆ. ಇದು ನಿಲ್ಲ ಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿಯೂ ಸಹ ಜೆಡಿಎಸ್ ನ ಮಾಜಿ ಸಚಿವ ಎಚ್.ಡಿ ರೇವಣ್ಣ ಅಪ್ತರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಬಿಜೆಪಿ ಅವರಿಗೆ ದ್ವೇಷ ರಾಜಕಾರಣ ಬಿಟ್ಟು ಬೇರೆ ಏನು ಗೊತ್ತಿಲ್ಲ. ಅವರಿಗೆ ಸತ್ಯ ಹೇಳುವುದಕ್ಕೆ ಬರುವುದಿಲ್ಲ. ಸುಳ್ಳನ್ನು ಸತ್ಯ ಮಾಡ್ತಾರೆ. ಸತ್ಯವನ್ನು ಸುಳ್ಳು ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336,7483892205



