ಡಿವಿಜಿಸುದ್ದಿ.ಕಾಂ, ದಾವಣಗೆರೆ: 2019-20ನೇ ಸಾಲಿಗೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಸೆ.೦೧ ರಿಂದ ಪ್ರಾಂಭವಾಗಿದ್ದು ೧ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿಗಳನ್ನು ಸಲ್ಲಿಸಲು ಮೂಲ ದಾಖಲೆಗಳೊಂದಿಗೆ ಎಸ್.ಎ.ಟಿ.ಎಸ್‌ನಲ್ಲಿನ ಹೆಸರು, ಆಧಾರ್ ಹಾಗೂ ಬ್ಯಾಂಕ್ ಖಾತೆಗಳಲ್ಲಿನ ಹೆಸರುಗಳು ಮತ್ತು ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರದ ಸಲ್ಲಿಸಬೇಕು. ಅರ್ಜಿಯನ್ನು www:ssp.karnataka.gov.in ವೆಬ್‌ಸೈಟ್ ನಲ್ಲಿ ಸಲ್ಲಿಸಬಹುದು.



