ಡಿವಿಜಿಸುದ್ದಿ.ಕಾಂ ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ಜಲಶಕ್ತಿ ಅಭಿಯಾನದ ಅಂಗವಾಗಿ ನಗರದಲ್ಲಿ ವಾಕಥಾನ್ ಆಯೋಜಿಸಲಾಗಿತ್ತು. ಅಭಿಯಾನಕ್ಕೆ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು. ಜನರಲ್ಲಿ ಜಲ ಸಂರಕ್ಷಣೆ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನ ಅಯೋಜಿಸಲಾಗುತ್ತಿದೆ. ಕಳೆದ ಭಾನುವಾರ ಸೈಕಲ್ ಥಾನ್ ಆಯೋಜಿಸಲಾಗಿತ್ತು. ಈ ವಾರ ವಾಕಥಾನ್ ಆಯೋಜಿಸಿದೆ. ವಾಕಥಾನ್ ಗೆ ಶಾಲಾ- ಕಾಲೇಜ್ ಮಕ್ಕಳು, ಪಾಲಿಕೆ ಅಧಿಕಾರಿಗಳು, ಸಾರ್ವಜನಿಕರು, ಹಿರಿಯರು ಉತ್ಸಾಹದಿಂದ ಭಾಗಿಯಾಗಿ ಅಭಿಯಾನ ಯಶಸ್ವಿಗೊಳಿಸಿದರು.







