ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಅ.03 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಲಿದೆ.
ಜೂ.25 ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಮಜಲು ವಾಹನ ರಹದಾರಿ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಂಡಿಸಿದ್ದು, ಈ ವಿಷಯಗಳಿಗೆ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದರಿಂದ ರಹದಾರಿಗಳಿಗೆ ಸಂಬಂಧಿಸಿದ ರಹದಾರಿದಾರರು ಸಲ್ಲಿಸಿರುವ ಅರ್ಜಿಗಳನ್ನು ಹಾಗೂ ಇನ್ನತರೆ ವಿಷಯಗಳನ್ನು ಮರು ಮಂಡಿಸಲು ಅ.03 ರಂದು ಬೆಳಿಗ್ಗೆ 11.30ಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆಯಲಾಗಿದೆ.
ಈಗಾಗಲೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ರಹದಾರಿದಾರರುಗಳಿಗೆ ವಿಷಯಕ್ಕೆ ಸಂಬಂಧಿಸಿದಂತೆ ನೋಟೀಸ್ ಬರೆದು ಅಂಚೆ ಮೂಲಕ ರವಾನಿಸಲಾಗಿರುತ್ತದೆ. ನೋಟೀಸ್ ತಲುಪದ ರಹದಾರಿದಾರರು ಈ ಪತ್ರಿಕಾ ಪ್ರಕಟಣೆಯನ್ನೇ ನೋಟೀಸ್ ಎಂದು ಪರಿಗಣಿಸಿ ಅ.03 ರಂದು ನಡೆಯಲಿರುವ ಸಭೆಗೆ ಹಾಜರಾಗುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎನ್.ಜೆ.ಬಣಕಾರ್ ತಿಳಿಸಿದ್ದಾರೆ.