ಡಿವಿಜಿಸುದ್ದಿ.ಕಾಂ, ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದಲ್ಲಿ ಮತ್ತೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಸೆ. 19ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆ. 18 ಮತ್ತು 19 ರಂದು ಉತ್ತರ ಕರ್ನಾಟಕದಲ್ಲಿ ಜೋರು ಮಳೆಯಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿದೆ. ಇದಲ್ಲದೆ, ಕರಾವಳಿ ಭಾಗದಲ್ಲಿಯೂ ಸಹ ಇಂದು ಭಾರೀ ಮಳೆ ಸುರಿಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಶನಿವಾರದ ವರೆಗೆ ಸಾಧಾರಣ ಮಳೆಯಾಗಲಿದೆ.
ಸೋಮವಾರ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗಿದ್ದು, ಇಂದಿನಿಂದ ಇನ್ನಷ್ಟು ಚುರುಕಾಗಲಿದೆ.