ಡಿವಿಜಿಸುದ್ದಿ.ಕಾಂ ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಗೆಟ್ಸ್ ಪ್ರತಿಷ್ಠಾನ ನೀಡುವ ‘ಜಾಗತಿಕ ಗೋಲ್ ಕೀಪರ್ ಪ್ರಶಸ್ತಿ’ ನೀಡಿ ಗೌರವಿಸಿದೆ.

ದೇಶಕ್ಕೆ ಸಮರ್ಪಣೆ
ಗೇಟ್ಸ್ ಪ್ರತಿಷ್ಠಾನ ಜಾಗತಿಕ ಗೋಲ್ಕೀಪರ್ ಪ್ರಶಸ್ತಿಯನ್ನು ಭಾರತದ 130 ಕೋಟಿ ನಾಗರಿಕರಿಗೆ ಅರ್ಪಿಸುತ್ತೇನೆ. ಸ್ವಚ್ಛ ಭಾರ ಅಡಿಯಲ್ಲಿ ಭಾರತೀಯರ ಸಮೂಹಿಕ ಪ್ರಯತ್ನದಿಂದ ಈ ಪ್ರಶಸ್ತಿ ಲಭಿಸಿದೆ. ಈ ಕಾರ್ಯಕ್ಕೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಕೈ ಜೋಡಿಸಿದ್ದಾರೆ ಎಂದು ಪ್ರಶಸ್ತಿ ಸ್ವೀಕರದ ಬಳಿಕ ಪ್ರಧಾನಿ ಮೋದಿ ಹೇಳಿದರು.
I dedicate the Global Goalkeeper Award, conferred by the @gatesfoundation, to the 130 crore people of India and the collective endeavours of our nation to improve cleanliness.
It makes me most happy that India’s successes in sanitation have helped women and children the most. pic.twitter.com/Va4QKMY3tv
— Narendra Modi (@narendramodi) September 25, 2019

ಸ್ವಚ್ಛ ಭಾರತ ಅಭಿಯಾನವನ್ನು ಜನರು ಚಳವಳಿಯಾಗಿ ಪರಿವರ್ತಿಸಿ, ನಿತ್ಯ ಜೀವನದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದರು. ಇದರ ಪರಿಣಾಮವಾಗಿ ಪ್ರಶಸ್ತಿ ಬಂದಿದ್ದು, ಈ ಪ್ರಶಸ್ತಿಯನ್ನು ಭಾರತಿಯರಿಗೆ ಸಮರ್ಪಿಸುತ್ತೇನೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪಡೆಯುತ್ತಿರುವುದು ನನಗೆ ಹೆಮ್ಮೆ ತಂದಿದೆ. ಭಾರತೀಯರು ಸವಾಲಾಗಿ ಸ್ವೀಕರಿಸಿದರೆ ಏನುಬೇಕಾದರು ಸಾಧಿಸಬಹುದು ಎಂದು ಹೇಳಿದರು.
The @gatesfoundation has honoured me with the Global Goalkeeper Award at a time when the world is marking Mahatma Gandhi’s 150th birth anniversary and when India has made remarkable progress in fulfilling his dream of a Swachh Bharat. pic.twitter.com/7P2rLQveh1
— Narendra Modi (@narendramodi) September 25, 2019



