ಡಿವಿಜಿ ಸುದ್ದಿ. ಕಾಂ, ಬೆಳಗಾವಿ:ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ ಅವರ ಜೊತೆಗೆ ಗುರುತಿಸಿಕೊಂಡಿದ್ದ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ ಇವತ್ತು ಬೆಳಗಾವಿಯಲ್ಲಿ ಪ್ರತ್ಯೇಕ್ಷವಾಗಿ ಯಡಿಯೂರಪ್ಪಗೆ ಹೊಸ ಆಫರ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಲ್ಲಿ, ಬಿಜೆಪಿ ರಾಜ್ಯದಲ್ಲಿ ದಿವಾಳಿ ಆಗಲಿದೆ. ಈಗಾಗಲೇ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ನನ್ನ ಸಂಪರ್ಕದಲ್ಲಿದ್ದು, ಯುಡಿಯೂರಪ್ಪ ಪುನಃ ಕೆಜೆಪಿಗೆ ಬರುವುದಾದ್ರೆ ಸ್ವಾಗತಿಸುತ್ತೇನೆ ಎಂದಿದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಪರಿಶ್ರಮವೇ ಕಾರಣ. ಅವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಬಾರದು.ಈಗಾಗಲೇ ಯಡಿಯೂರಪ್ಪ ಮಗ ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸರ್ಕಾರವು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದೆ. ಇದೇ ರೀತಿ ಕೇಂದ್ರದ ಧೋರಣೆ ಮುಂದುವರಿದರೆ ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು. ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ನಿರ್ಲಕ್ಷ್ಯ ಮಾಡಬಾರದು ಎಂದರು.